ಪುತ್ತೂರು : ಪುತ್ತೂರಿನ ಧರ್ಬೆಯ ಮುಖ್ಯರಸ್ತೆಯಲ್ಲಿ ತ್ರಿಬಲ್ ರೈಡ್ ನಡೆಸಿದ ಯುವಕರು ಹಠಾತ್ ಬ್ರೇಕ್ ಹಾಕಿದ ಕಾರಣ ಸರಣಿ ಅಪಘಾತ ಸಂಭವಿಸಿ ನಂತರ ವಾಗ್ವಾದಕ್ಕೆ ತಿರುಗಿದ ಘಟನೆ ಜು.12 ರ ರಾತ್ರಿ ನಡೆದಿದೆ.
ಪುತ್ತೂರಿನಿಂದ ಸ್ಕೂಟರ್ ನಲ್ಲಿ ಬರುತ್ತಿದ್ದ ಯುವಕರ ತಂಡ ತ್ರಿಬಲ್ ರೈಡ್ ನಲ್ಲಿ ರಸ್ತೆಯಲ್ಲಿ ಅಡ್ಡದಿಡ್ಡ ಚಲಿಸಿ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂದಿನ ಕಾರಿನವರು ಬ್ರೇಕ್ ಹಾಕಿದ್ದಾರೆ ಕಾರಣ ಹಿಂದಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಕಾರಿಗೆ ಅಪಘಾತವಾಗಿದೆ.
ಸ್ಕೂಟರ್ ಜಖಂಗೊಂಡಿದೆ. ತ್ರಿಬಲ್ ರೈಡ್ ನಡೆಸಿದ ಯುವಕರು ಪ್ರಶ್ನಿಸಲು ಬಂದವರಲ್ಲಿ ವಾಗ್ವಾದ ನಡೆಸಿದ ಘಟನೆ ನಡೆದಿದೆ.
ಸ್ಥಳದಲ್ಲಿ ಇತ್ತಂಡಗಳಿಂದ ಜನ ಜಮಾಯಿಸಿ ಕೊನೆಗೆ ಪೊಲೀಸರು ಆಗಮಿಸಿ ಸೇರಿದ ಜನರನ್ನು ಚದುರಿಸಿದ ಘಟನೆ ನಡೆದಿದೆ.