ಪುತ್ತೂರು: ಕಲ್ಲಾರೆ ಪವಾಜ್ ಕಾಂಪ್ಲೆಕ್ಸ್ ನ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ದಕ್ಷಿಣ ಕನ್ನಡ ತೆಂಗು ರೈತ ಸಂಸ್ಥೆಯ ಕಾರ್ಪೋರೆಟ್ ಕಛೇರಿಯು ಕಲ್ಲಾರೆ ಧನ್ವಂತರಿ ಆಸ್ಪತ್ರೆಯ ಹತ್ತಿರ ಜು.14 ರಂದು ಸ್ಥಳಾಂತರಗೊಳ್ಳಲಿದೆ.
ಬೆಳಿಗ್ಗೆ ಶ್ರೀ ಗಣಪತಿ ಹೋಮ ಮುಂತಾದ ವೈದಿಕ ಕಾರ್ಯಗಳು ನಡೆಯಲಿದ್ದು, ಸಂಸ್ಥೆಯ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ಕಡಮಜಲು ಸುಭಾಷ್ ರೈರವರು ಉದ್ಘಾಟಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಕುಸುಮಾಧರ್ ಎಸ್.ಕೆ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.