ಪುತ್ತೂರು: ದಕ್ಷಿಣ ಕನ್ನಡ ತೆಂಗು ರೈತ ಸಂಸ್ಥೆಯ ಕಚೇರಿ ಸ್ಥಳಾಂತರಗೊಂಡು, ಧನ್ವಂತರಿ ಆಸ್ಪತ್ರೆಯ ಹತ್ತಿರದ ಎಂ.ಆರ್. ಕಾಂಪ್ಲೆಕ್ಸ್‌ನಲ್ಲಿ ನೂತನ ಸ್ಥಳದಲ್ಲಿ ಕಾರ್ಯಾರಂಭಗೊಳಿಸಿದೆ.
ಸಂಸ್ಥೆಯ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಕುಸುಮಧರ್ ಎಸ್.ಕೆ ಹಾಗೂ ಗೌರವಾಧ್ಯಕ್ಷ ಕೃಷಿಕ ಕಡಮಜಲು ಸುಭಾಷ್ ರೈ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಲಹಾ ಸಮಿತಿಯ ಸದಸ್ಯ ಶ್ರೀ ಕುಮಾರ್ ಪೆರ್ನಾಜೆ, ನಿರ್ದೇಶಕರು ಶ್ರೀ ವರ್ಧಮಾನ್ ಶೆಟ್ಟಿ, ಶ್ರೀಮತಿ ಲತಾ, ಮುಖ್ಯ ಸಲಹೆಗಾರ ಶ್ರೀ ಯತೀಶ್ ಕೆ.ಎಸ್., ಹಾಗೂ ಲಹರಿ ಡ್ರೈಫ್ರೂಟ್ಸ್ ಸಂಸ್ಥೆಯ ಮಾಲಕಿ ಲಿಖಿತ ಕುಸುಮ್ ಭಾಗವಹಿಸಿದ್ದರು.
ಆರಂಭದಲ್ಲಿ ಸಿಬ್ಬಂದಿ ನಿರ್ಮಲಾ ಪ್ರಾರ್ಥನೆ ಸಲ್ಲಿಸಿದರು.
ಸಿಇಒ ಗಣೇಶ್ ಕೆ ಸ್ವಾಗತ ಭಾಷಣ ನೀಡಿದರು.
ಮ್ಯಾನೇಜರ್ ನವ್ಯ ಕಾರ್ಯಕ್ರಮ ನಿರೂಪಿಸಿ ಕೊನೆಗೆ ವಂದಿಸಿದರು.
ಸಂಸ್ಥೆಯ ಸಿಬ್ಬಂದಿಗಳ ಶ್ರಮದ ಫಲವಾಗಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ ತಂಡದ ಸದಸ್ಯರು ಆಗಮಿಸಿ ಸಂಸ್ಥೆಗೆ ಶುಭಾಶಯಗಳನ್ನು ತಿಳಿಸಿದರು.

























