ಪುತ್ತೂರು : ನಗರದ ಅರುಣ ಸಭಾಭವನದಿಂದ ಎಪಿಎಂಸಿ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಆದರ್ಶ ಆಸ್ಪತ್ರೆ ಮುಂಭಾಗದ ರಸ್ತೆ ಬುಧವಾರ ಸುರಿದ ಮಳೆಗೆ ಕೃತಕ ತೋಡಾಗಿ ಮಾರ್ಪಾಟ್ಟಿದೆ.
ಕಳೆದ ಹಲವು ಭಾರೀ ಇಲ್ಲಿ ಕೃತಕ ನೆರೆ ಸೃಷ್ಟಿಯಾಗುತ್ತಿದ್ದರೂ ನಗರ ಆಡಳಿತ ಶ್ವಾಶತ ಪರಿಹಾರ ಕಲ್ಪಿಸಿಲ್ಲ. ಚರಂಡಿ ದುರಸ್ತಿ ಮಾಡಿಲ್ಲ. ಹೀಗಾಗಿ ಒಂದು ತಾಸು ಮಳೆ ಬಂದರೆ ಈ ರಸ್ತೆ ಮುಳುಗಡೆ ಆಗುತ್ತದೆ. ರಿಕ್ಷಾ ಸಹಿತ ವಾಹನಗಳು ನೀರಲ್ಲಿ ತೇಲಬೇಕಾದ ಸ್ಥಿತಿ ಇಲ್ಲಿನದು.




























