ವಿಟ್ಲ: ಕಟ್ಟಡ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಕೆಂಪು ಕಲ್ಲು ಮತ್ತು ಮರಳು ನಿಷೇಧದಿಂದಾಗಿ ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಖಾಲಿ ಜೇಬಿನಲ್ಲಿ ಕೈ ಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದ್ದು, ಇದರಿಂದ ಕಾರ್ಮಿಕರ ಸಂಸಾರ ಬೀದಿಗೆ ಬಿದ್ದಂತಾಗಿದೆ.
ಈ ಬಗ್ಗೆ ಅತೀ ಶೀಘ್ರವಾಗಿ ಕೆಂಪು ಕಲ್ಲು ಮತ್ತು ಮರಳು ನಿಷೇಧವನ್ನು ಸಡಿಲ ಗೊಳಿಸಿ ಕಾರ್ಮಿಕ ವರ್ಗದವರಿಗೆ ದುಡಿಮೆಗೆ ಅವಕಾಶ ಮಾಡಕೊಡಿವಂತೆ ವಿಟ್ಲ ಬಿ ಎಂ ಎಸ್ ನ ಅಧ್ಯಕ್ಷರು ನಾಗೇಶ್ ಸುವರ್ಣ ಹಾಗೂ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೆಲಿಂಜ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಬಳಿಕ ತಹಶೀಲ್ದಾರರಿಗೆ ಕಟ್ಟಡ ಕಾರ್ಮಿಕರ ಉಪಸ್ಥಿತಿಯಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿ ಎಂ ಎಸ್ ನ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮಣಿಯಾಲ್ಲ ಬಂಟ್ವಾಳ, ಹಾಗೂ ಬಿ ಎಂ ಎಸ್ ಬಂಟ್ವಾಳದ ಪರಮೇಶ್ವರ್, ಉಪಾಧ್ಯಕ್ಷರು ಪುಷ್ಪರಾಜ್ ಕೆಲಿಂಜ, ಜೊತೆ ಕಾರ್ಯದರ್ಶಿ ಶಿವ ಪ್ರಸಾದ್ ಕಟ್ಟೆ, ಸಂಘಟನಾ ಕಾರ್ಯದರ್ಶಿ ಅನಂತೇಶ್, ಸಚ್ಚಿದಾನಂದ, ಹಾಗೂ ಎಲ್ಲಾ ಬಿ ಎಂ ಎಸ್ ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.