ಪುತ್ತೂರು : KCET ಅಭ್ಯರ್ಥಿಗಳು ಎದುರಿಸುತ್ತಿರುವ ಸೀಟ್ ಬ್ಲಾಕಿಂಗ್, ಹಣ ವಸೂಲಿ ದಂಧೆ ಮತ್ತು ಸಾಫ್ಟ್‌ವೇರ್ ದೋಷದ ಹಿನ್ನೆಲೆಯಲ್ಲಿ ABVP ಪುತ್ತೂರು ನಗರ ದ ವತಿಯಿಂದ ಅಮರ್ ಜವಾನ್ ಜೋತಿ ಬಳಿ ಪ್ರತಿಭಟನೆ ನಡೆಯಿತು.
ABVP ಪುತ್ತೂರು ಜಿಲ್ಲಾ ಸಂಚಾಲಕರಾದ ಶ್ರೀ ಸಮನ್ವಿತ್ ಮಾತನಾಡಿ, ವಿದ್ಯಾರ್ಥಿಗಳು ಈಗ ಅನುಭವಿಸುತ್ತಿರುವ ತೀವ್ರ ಒತ್ತಡ ಹಾಗೂ ಅನ್ಯಾಯದ ಕುರಿತು ಆಕ್ರೋಶ ವ್ಯಕ್ತಪಡಿಸಿದರು ಹಾಗೂ ABVP ಏಕೆ ಈ ಸಮಸ್ಯೆಯ ವಿರುದ್ಧ ಧ್ವನಿ ಎತ್ತುತ್ತಿದೆ ಎಂಬುದರ ಬಗ್ಗೆ ವಿವರಣೆ ನೀಡಿದರು.
ಹೋರಾಟದಲ್ಲಿ ABVP ವಿಭಾಗ ವಿದ್ಯಾರ್ಥಿನಿ ಪ್ರಮುಕ್ ಹಾಗೂ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಸಮಿತಿ ಸದಸ್ಯೆ ಕು.ಅಮೃತಾಂಬ , ಪುತ್ತೂರು ತಾಲೂಕು ಸಂಚಾಲಕರಾದ ಶ್ರೀ ಶ್ರೇಯಸ್ , ಕಾರ್ಯಕರ್ತರಾದ ಶ್ರೀ ಭುವನ್ ಡಿ ರವರು ಉಪಸ್ಥಿತರಿದ್ದರು.