ಬಿಲ್ಲವ ಸಂಘ (ರಿ.) ವಿಟ್ಲ, ಮಹಿಳಾ ಬಿಲ್ಲವ ಘಟಕ ಹಾಗೂ ಯುವವಾಹಿನಿ (ರಿ.) ವಿಟ್ಲ ಇದರ ವತಿಯಿಂದ ಆಟಿ ತಿಂಗೊಲ್ದ ಪೊಲಬು ಕಾರ್ಯಕ್ರಮವು ದಿನಾಂಕ :27/07/2025 ನೇ ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ವಿಟ್ಲದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಹಿಳಾ ಬಿಲ್ಲವ ಘಟಕದ ಅಧ್ಯಕ್ಷರಾದ ಮಮತಾ ಸಂಜೀವ ಪೂಜಾರಿ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಗುಣವತಿ ರಮೇಶ್ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಸುರತ್ಕಲ್ ಹೋಬಳಿ, ಮುಖ್ಯ ಅತಿಥಿಗಳಾಗಿ ಶ್ರೀ ಸಂಜೀವ ಪೂಜಾರಿ ಅಧ್ಯಕ್ಷರು ಲಯನ್ಸ್ ಕ್ಲಬ್ ವಿಟ್ಲ, ಶ್ರೀ ಹರೀಶ್ ಪೂಜಾರಿ ಸಿ ಎಚ್ ಅಧ್ಯಕ್ಷರು ರೋಟರಿ ಕ್ಲಬ್ ವಿಟ್ಲ, ಶ್ರೀಮತಿ ಸೌಮ್ಯ ಚಂದ್ರಹಾಸ ಅಧ್ಯಕ್ಷರು ಜೆ ಸಿ ಐ ವಿಠಲ್ ಸಂಸ್ಥೆ, ಶ್ರೀ ಬಾಬು ಪೂಜಾರಿ ಕೊಪ್ಪಳ ಗೌರವಾಧ್ಯಕ್ಷರು ಬಿಲ್ಲವ ಸಂಘ ವಿಟ್ಲ, ಶ್ರೀ ಹರೀಶ್ ಪೂಜಾರಿ ಮರುವಾಳ ಅಧ್ಯಕ್ಷರು ಯುವವಾಹಿನಿ (ರಿ.) ವಿಟ್ಲ, ಶ್ರೀಮತಿ ಹೇಮಲತಾ ಜಗನ್ನಾಥ ಸಾಲ್ಯಾನ್ ಗೌರವಾಧ್ಯಕ್ಷರು ಮಹಿಳಾ ಮಂಡಲ ವಿಟ್ಲ, ಶ್ರೀ ಲಕ್ಷ್ಮಣ ಪೂಜಾರಿ ಕಾರ್ಯದರ್ಶಿ ಬಿಲ್ಲವ ಸಂಘ ವಿಟ್ಲ, ಶ್ರೀಮತಿ ಪ್ರೇಮಲತಾ ಸೋಮಶೇಖರ್ ಗೌರವಾಧ್ಯಕ್ಷರು ಮಹಿಳಾ ಬಿಲ್ಲವ ಸಂಘ ವಿಟ್ಲ, ಶ್ರೀಮತಿ ಭಾರತಿ ಪ್ರಕಾಶ್ ಕಾರ್ಯದರ್ಶಿ ಮಹಿಳಾ ಬಿಲ್ಲವ ಸಂಘ ವಿಟ್ಲ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಳೆದ ವರ್ಷ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಶೇಕಡಾ 95% ಗಿಂತ ಹೆಚ್ಚು ಅಂಕ ಪಡೆದ 9 ಮಕ್ಕಳನ್ನು ಗುರುತಿಸಲಾಯಿತು ಹಾಗೂ ಮಹಿಳಾ ಘಟಕದ ವತಿಯಿಂದ ಸಂಘಕ್ಕೆ ಪೋಡಿಯಂ ನೀಡಲಾಯಿತು, ಆಟಿ ತಿಂಗಳಿನಲ್ಲಿ ಸಿಗುವಂತಹ ಕೆಲವು ಬಗೆಯ ರುಚಿ ರುಚಿಯಾದ ತಿಂಡಿಗಳನ್ನು ಸಂಘದ ಸದಸ್ಯರು ತಂದಿದ್ದರು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಶ್ರೀಮತಿ ಕವಿತಾ ಪರಮೇಶ್ವರ ಸ್ವಾಗತಿಸಿದರು, ವರದಿಯನ್ನು ಶ್ರೀಮತಿ ಪ್ರಮೀಳಾ, ವಿವಿದ ಬಗೆಯ ತಿಂಡಿ ತಿನಸುಗಳನ್ನು ತಂದ ಸದಸ್ಯರ ಹೆಸರನ್ನು ಶ್ರೀಮತಿ ಶೋಭಾ ಹಾಗೂ ಧನ್ಯವಾದವನ್ನು ಕಾರ್ಯದರ್ಶಿ ಭಾರತಿ ಪ್ರಕಾಶ್, ಕಾರ್ಯಕ್ರಮ ನಿರೂಪಣೆಯನ್ನು ಶ್ರೀಮತಿ ಧನಲಕ್ಸ್ಮಿ ರಾಜೇಶ್ ಮತ್ತು ಕುಮಾರಿ ಅಕ್ಷತಾ ನಿರ್ವಹಿಸಿದರು ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು