ಪುತ್ತೂರು:ಕೋರ್ಟ್ ಬಳಿಯ ಮೀನು ಮಾರುಕಟ್ಟೆ ಸಮೀಪ ನಡೆದ ಹಲ್ಲೆ ಪ್ರಕರಣದಲ್ಲಿ ವ್ಯಕ್ತಿಯೋರ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಕಡಬದಲ್ಲಿ ಹಿಂದೆ ಸರಕಾರಿ ಉದ್ಯೋಗಿಯಾಗಿದ್ದ ಹರೀಶ್ ಎಂಬವರು ಹಲ್ಲೆಗೊಳಗಾದವರು. ಸ್ಥಳೀಯ ಹಣಕಾಸು ಸಂಸ್ಥೆ ನಡೆಸುತ್ತಿರುವ ಪ್ರಸಾದ್ ಎಂಬಾತ ಹಣಕಾಸು ವ್ಯವಹಾರ ಸಂಬಂಧ ಹರೀಶ್‌ರೊಂದಿಗೆ ವಾಗ್ವಾದಕ್ಕಿಳಿದಿದ್ದು, ನಂತರ ಕಬ್ಬಿಣದ ಪೈಪ್‌ನಿಂದ ಅವರ ತಲೆಗೆ ಹೊಡೆದು ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ತೀವ್ರವಾಗಿ ಗಾಯಗೊಂಡಿರುವ ಹರೀಶ್ ಅವರನ್ನು ತಕ್ಷಣವೇ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಪುತ್ತೂರು ನಗರ ಪೊಲೀಸ್ ಠಾಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರಿಸಿದ್ದಾರೆ.