ಬೆಂಗಳೂರು: ರಾಮ್ ಜ್ಯುವೆಲ್ಲರಿ ಶಾಪ್ಗೆ ಎಂಟ್ರಿ ಕೊಟ್ಟ ಖದೀಮರು 18 ಸೆಕೆಂಡ್ನಲ್ಲೇ ₹18 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾರೆ.
ಹೌದು, ಅಂಗಡಿ ಸಿಬ್ಬಂದಿಗೆ ಗನ್ ತೋರಿಸಿ ಚಿನ್ನಾಭರಣ ದೋಚಿದ ಘಟನೆ ಮಾಗಡಿ ರಸ್ತೆಯ ಮಾಚೋಹಳ್ಳಿ ಗೇಟ್ ಬಳಿ ನಡೆದಿದೆ. ಅಂಗಡಿ ಕ್ಲೋಸ್ ಮಾಡುವ ಸಮಯದಲ್ಲಿ ಈ ಘಟನೆ ನಡೆದಿದೆ. 24ರಂದು 9 ಗಂಟೆ ಸುಮಾರಿಗೆ ಕೈನಲ್ಲಿ ಗನ್ ಹಿಡಿದು ಮುಸುಕುದಾರಿಗಳ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಇದೇ ವೇಳೆ ಕಳ್ಳರ ಕೈಗೆ ಸಿಕ್ಕ ಚಿನ್ನಾಭರಣ ದೋಚಿ ಮೂವರು ಎಸ್ಕೇಪ್ ಆಗಿದ್ದಾರೆ.
ಇನ್ನೂ, ಎಂಟ್ರಿಗೂ ಮುನ್ನ ಕಳ್ಳರು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದಾರೆ. ಆ ಕಾರುನ್ನು ರಸ್ತೆ ಬದಿ ನಿಲ್ಲಿಸಿ ಏಕಾಏಕಿ ಅಂಗಡಿ ಒಳಗಡೆ ನುಗ್ಗಿದ್ದಾರೆ. ಆದ್ರೆ, ಇಲ್ಲಿ ಕಳ್ಳರು ಆಟಿಕೆ ಗನ್ ತೋರಿಸಿ ಚಿನ್ನಾಭರಣ ದರೋಡೆ ಮಾಡಿದ್ದು ಅಚ್ಚರಿಯ ವಿಚಾರವಾಗಿದೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ಮತ್ತು ಕಾರಿನ ಮಾಹಿತಿ ಆಧರಿಸಿ ಆರೋಪಗಳಿಗೆ ಶೋಧ ನಡೆಸುತ್ತಿದ್ದಾರೆ.