ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ವಿಟ್ಲ ಘಟಕ, ಬಿಲ್ಲವ ಸಂಘ (ರಿ.) ವಿಟ್ಲ ಮಹಿಳಾ ಬಿಲ್ಲವ ಘಟಕ ವಿಟ್ಲ ಹಾಗೂ ಲಯನ್ಸ್ ಕ್ಲಬ್ ವಿಟ್ಲ, NSS ಘಟಕ ವಿಟ್ಲ ಪದವಿ ಪೂರ್ವ ಕಾಲೇಜ್ ವಿಟ್ಲ ಇದರ ಸಹಭಾಗಿತ್ವದಲ್ಲಿ ವಿಟ್ಲದ ಅರಮನೆ ಗದ್ದೆಯಲ್ಲಿ ಆಗಸ್ಟ್ 10 ರಂದು ನಡೆಯುವ ಸಾರ್ವಜನಿಕ ಕೆಸರ್ಡೊಂಜಿ ದಿನ ವಿಶೇಷ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಯುವವಾಹಿನಿ (ರಿ.) ವಿಟ್ಲ ಇದರ ಅಧ್ಯಕ್ಷರಾದ ಹರೀಶ್ ಪೂಜಾರಿ ಮರುವಾಳ, ಬಿಲ್ಲವ ಸಂಘ (ರಿ.) ವಿಟ್ಲ ಇದರ ಅಧ್ಯಕ್ಷರಾದ ಜಯಪ್ರಕಾಶ್, ಬ್ರಹ್ಮಶ್ರೀ ವಿವಿಧೋದ್ದೇಶ ಸೇವಾ ಸಹಕಾರಿ ಸಂಘ ನಿ ವಿಟ್ಲ ಇದರ ಅಧ್ಯಕ್ಷರಾದ ಸಂಜೀವ ಪೂಜಾರಿ ನಿಡ್ಯ, ಲಯನ್ಸ್ ಕ್ಲಬ್ ವಿಟ್ಲ ಇದರ ಅಧ್ಯಕ್ಷರಾದ ಸಂಜೀವ ಪೂಜಾರಿ, ಮಹಿಳಾ ಬಿಲ್ಲವ ಘಟಕ ಇದರ ಅಧ್ಯಕ್ಷರಾದ ವನಿತಾ ಚಂದ್ರಹಾಸ, ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ, ಕೋಶಾಧಿಕಾರಿ ಬಾಲಕೃಷ್ಣ ಪಟ್ಲ, ಯುವವಾಹಿನಿ (ರಿ.) ವಿಟ್ಲ ಇದರ ಕಾರ್ಯದರ್ಶಿ ವಿನೋದ್ ಕುಮಾರ್, ಕೋಶಾಧಿಕಾರಿ ಶ್ರೀಮತಿ ಶೋಭಾ, ಜೊತೆ ಕಾರ್ಯದರ್ಶಿ ಶ್ರೀಮತಿ ನಿರ್ಮಲ, ಉಪಾಧ್ಯಕ್ಷರಾದ ಕೆ ಟಿ ಆನಂದ, ಕ್ರೀಡಾ ನಿರ್ದೇಶಕರಾದ ಅಕ್ಷಯ್ ಮರವಾಳ, ಸಂಘಟನಾ ಕಾರ್ಯದರ್ಶಿ ಸುಜನ್, ಸದಸ್ಯರಾದ ಕೇಶವ, ಸುನೀತಾ, ಸಂದೀಪ್ ಕೆಲಿಂಜ, ಅಶ್ವಿನ್ ಕೆಲಿಂಜ,ಶ್ರೀಮತಿ ನಯನ, ಉದಯ ಸಾಲ್ಯಾನ್, ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ದಿವ್ಯ ಉಪಸ್ಥಿತಿಯಾಗಿ ಬಂಗಾರು ಅರಸರು ವಿಟ್ಲ ಅರಮನೆ, ಶ್ರೀ ಕೃಷ್ಣ ಗುರೂಜಿ ಧರ್ಮದರ್ಶಿಗಳು ಶ್ರೀ ಕ್ಷೇತ್ರ ಕುಕ್ಕಾಜೆ, ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸದರು ದಕ್ಷಿಣ ಕನ್ನಡ, ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು, ಸತೀಶ್ ಕುಂಪಲ ಜಿಲ್ಲಾಧ್ಯಕ್ಷರು ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ, ಅರುಣ್ ಕುಮಾರ್ ಪುತ್ತಿಲ ಹಿಂದೂ ಮುಖಂಡರು, ಆರ್ ಪದ್ಮರಾಜ್ ಪೂಜಾರಿ ಕೋಶಾಧಿಕಾರಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಕುದ್ರೋಳಿ ಪ್ರಮುಖ ಗಣ್ಯರು ಉಪಸ್ಥಿತರಿರುತ್ತಾರೆ