ಬೆಂಗಳೂರು: ಲವರ್ಸ್ ಜೊತೆ ಗೋವಾಕ್ಕೆ ಹೋಗಲು ಹಣ ಇಲ್ಲದೆ ಕಳ್ಳತನ ಹಾದಿ ಹಿಡಿದಿದ್ದ ಮೂವರು ವಿದ್ಯಾರ್ಥಿಗಳನ್ನು ಬೆಂಗಳೂರಿನ ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ಬಿಕಾಂ ವಿದ್ಯಾರ್ಥಿಗಳಾದ ಯಶವಂತ್, ರಮೇಶ್, ತನುಷ್ ಬಂಧಿತರು.
ಆರೋಪಿಗಳು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದಾರೆ. ಆರೋಪಿಗಳು ತಮ್ಮ ಲವರ್ಸ್ ಜೊತೆ ಗೋವಾಕ್ಕೆ ಹೋಗಿ ಮೋಜು ಮಸ್ತಿ ಮಾಡಬೇಕೆಂದು ಅಂದುಕೊಂಡಿದ್ದರು. ಆದರೆ, ಗೋವಾಕ್ಕೆ ಹೋಗಲು ಆರೋಪಿಗಳ ಬಳಿ ಹಣ ಇರಲಿಲ್ಲ.
ಹೀಗಾಗಿ, ಆರೋಪಿಗಳು ಪರಿಚಯಸ್ಥ ಶ್ರೀನಿವಾಸ್ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ. ಕಳ್ಳತನದ ಹಣದಲ್ಲಿ ಮೂವರೂ ತಮ್ಮ ಲವರ್ಸ್ ಜೊತೆ ಗೋವಾಗೆ ಹೋಗಿ ಮೋಜು ಮಸ್ತಿ ಮಾಡಿದ್ದಾರೆ. ಲವರ್ಸ್ ಜೊತೆ ಮೋಜು ಮಸ್ತಿ ಮಾಡಿ, ಆರೋಪಿಗಳು ಬೆಂಗಳೂರಿಗೆ ಬರುತ್ತಿದ್ದಂತೆ ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಪೊಲೀಸರು ಅರ್ಧ ಕೆಜಿಗೂ ಹೆಚ್ಚು ಚಿನ್ನಾಭರಣ, 10 ಲಕ್ಷ ನಗದು ಜಪ್ತಿ ಮಾಡಿಕೊಂಡಿದ್ದಾರೆ.