ಮುಂಡೂರು: ಮುಂಡೂರು ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ಆಶ್ರಯದಲ್ಲಿ “ಭತ್ತ ಬೆಳೆಯೋಣ ಬಾ” ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶ್ರೀ ಕ್ಷೇತ್ರ ಗ್ರಾಮಭಿವೃದ್ಧಿ ಯೋಜನೆ ಸಹಕಾರ ದೊಂದಿಗೆ ಸುಮಾರು 3ಎಕರೆ ಜಾಗದಲ್ಲಿ, ಕುಕಿನಡ್ಕ ದೇವಸ್ಥಾನದಲ್ಲಿ ಭತ್ತ ನಾಟಿ ಮಾಡುವ ಕೆಲಸಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ನಾಟಿ ಮಾಡುವ ಕಾರ್ಯಕ್ರಮವನ್ನು ತೆಂಗಿನ ಕಾಯಿ ಒಡೆಯುವ ಮೂಲಕ ಯೋಜನಾಧಿಕಾರಿ ಆನಂದರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪೂಜ್ಯ ವೀರೇಂದ್ರ ಹೆಗ್ಗಡೆ ಯವರ ನೇತೃತ್ವದಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಮೂಲಕ ರೈತರ ಬದುಕನ್ನು ಹಸನುಗೊಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇವತ್ತು ಕೊರೊನಾದ ಮಹಾಮಾರಿಯ ಸಂದರ್ಭದಲ್ಲಿ ದೇವಸ್ಥಾನದ ಸಹಕಾರದಲ್ಲಿ ಕೃಷಿ ಚಟುವಟಿಕೆಗಳಿಗೆ ಪ್ರೇರಣೆ ನೀಡುವುದು ಸಂತಸದ ವಿಚಾರ. ಈ ಊರಿನ ಜನರೆಲ್ಲಾ ಸೇರಿಕೊಂಡು ಒಳ್ಳೆಯ ಬೆಳೆ ಬರಲಿ ಆ ಮೂಲಕ ದೇವರ ನೈವೇದ್ಯಕ್ಕೆ ಈ ಗದ್ದೆಯ ಭತ್ತ ಉಪಯೋಗ ವಾಗಲಿ. ಯೋಜನೆ ಸದಾ ಕೃಷಿಕರ ಜೊತೆ ಇದ್ದು ಸಂಪೂರ್ಣ ಸಹಕಾರ ನೀಡುತ್ತದೆ. ಕುಕ್ಕಿನಡ್ಕ ಸುಬ್ರಾಯ ದೇವರ ಅನುಗ್ರಹ ಸದಾ ನಿಮ್ಮ ಮೇಲಿರಲಿ ಎಂದು ಶುಭ ಹಾರೈಸಿದರು.
ದೇವಸ್ಥಾನದ ಮಾಜಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮುರಳಿ ಭಟ್ ಕಾರ್ಯಕ್ರಮದ ಅವಶ್ಯಕತೆಗಳ ಕುರಿತು ತಿಳಿಸಿದರು. ಭತ್ತ ಬೆಳೆಯೋಣ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಕಣ್ಣುರಾಯ ಸ್ವಾಗತಿಸಿ,ಪಟ್ಟೆ ಸದಾಶಿವ ಶೆಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಅರುಣ್ ಪುತ್ತಿಲ
ಯೋಜನೆಯ ಉಮೇಶ್, ಪ್ರಕಾಶ್,ಶ್ರೀಮತಿ ಶ್ರುತಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಣ್ಣ ಗೌಡ,ಸುಬ್ರಹ್ಮಣ್ಯ ರಾವ್, ದುಗ್ಗ ಅಜಲ,ರಜನಿ ಗೌಡ, ಅರ್ಚಕ ನಾಗೇಶ್ ರಾವ್,ಪ್ರಸಾದ್ ಬೈಪಾಡಿತ್ತಾಯ, ಧನಂಜಯ ಕುಲಾಲ್,ಸುಧೀರ್ ಶೆಟ್ಟಿ ನೇಸರ,ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಉಮೇಶ್ ಗುತ್ತಿನಪಾಲು, ಶೇಷಪ್ಪ ಶೆಟ್ಟಿ,ಜಯಾನಂದ ಪಟ್ಟೆ,ಭದ್ರಯ್ಯ ಆಚಾರಿ, ಬಾಲಚಂದ್ರ ಕಡ್ಯ,ಧನಂಜಯ ಕಲ್ಲಮ,ಪಂಚಾಯತ್ ಸದಸ್ಯ ಅಶೋಕ್ ಪುತ್ತಿಲ,ಪ್ರಸಾದ್ ಬಿಕೆ, ಉದಯ ಪಜೀಮಣ್ಣು, ರಮೇಶ ಗುತ್ತಿನಪಾಲು, ಪುಟ್ಟಣ್ಣ ಗೌಡ, ವಿಶ್ವನಾಥ ಗೌಡ,ಶ್ರೀಮತಿ ಗೀತಾ ರಮೇಶ,ಶ್ರೀಮತಿ ಲಲಿತ,ಗದ್ದೆ ನೀಡಿದ ಸೀತಾರಾಮ್ ಶಿಶಿಲ, ಪುರುಷೋತ್ತಮ್ ಆಚಾರ್, ಸುಬ್ರಮಣ್ಯ ಆಚಾರ್, ಗುರು ಪ್ರಸಾದ್,ಶ್ರೀಮತಿ ರತ್ನಾವತಿ, ಮೋಹನ ಆಚಾರ್ಯ,ಜಿನ್ನಪ್ಪ ಆಚಾರ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.