ಪುತ್ತೂರು: ಪುತ್ತೂರಿನಲ್ಲಿ ಅಪ್ರಾಪ್ತರಿಬ್ಬರು ಜೊತೆಯಲ್ಲಿದ್ದ ವಿಡಿಯೋವನ್ನು ಅಪರಿಚಿತ ಮೀಡಿಯಾ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಕುರಿತ ದೂರಿಗೆ ಸಂಬಂಧಿಸಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.5ರಂದು ಬೀರಮಲೆ ಗುಡ್ಡೆಯಲ್ಲಿ ಅಪ್ರಾಪ್ತರಿಬ್ಬರು ಜೊತೆಯಲ್ಲಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕುರಿತ ಪ್ರಕರಣಕ್ಕೆ ಸಂಬಂಧಿಸಿ ವೀಡಿಯೋ ಪ್ರಸಾರ ಮಾಡಿದ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾಧ್ಯಮಗಳಲ್ಲಿ ಅಪ್ರಾಪ್ತ ವಯಸ್ಕರ ವಿಡಿಯೋ ಹರಿಯ ಬಿಡಬಾರದೆಂದು ನಿರ್ಭಂದನೆಯಿದ್ದರೂ ಕೂಡ ಕೆಲವು ಅಪರಿಚಿತ ವ್ಯಕ್ತಿಗಳು, ಅಪರಿಚಿತ ಮೀಡಿಯಾ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹರಿಯಬಿಟ್ಟಿದ್ದರು.
ಈ ಬಗ್ಗೆ ಪ್ರಕರಣದ ಅಪ್ರಾಪ್ತ ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ಮಾನ್ಯ ನ್ಯಾಯಾಲಯದಲ್ಲಿ ಅನುಮತಿ ಪಡೆದು ಜು.28ರಂದು ಪುತ್ತೂರು ಮಹಿಳಾ ಠಾಣೆಯಲ್ಲಿ 74ಜೆ.ಜೆ ಆಕ್ಟ್ ನಂತೆ ಪ್ರಕರಣ ದಾಖಲಿಸಲಾಗಿದೆ.