ಅಕ್ಷಯ ಕಾಲೇಜು ಪುತ್ತೂರು, ಫ್ಯಾಷನ್ ಡಿಸೈನ್ ವಿಭಾಗ, “ಫಸೆರಾ” ಫ್ಯಾಷನ್ ಡಿಸೈನ್ ಅಸೋಸಿಯೇಷನ್ ಮತ್ತು ಐಕ್ಯೂಎಸಿ ಇವುಗಳ
ಸಹಯೋಗದಲ್ಲಿ ಹೊಸದಾಗಿ ಪ್ರವೇಶ ಪಡೆದಿರುವ ಪ್ರಥಮ ಫ್ಯಾಷನ್ ಡಿಸೈನ್ ವಿದ್ಯಾರ್ಥಿಗಳಿಗೆ “CARICATURE ” ವಿಷಯದಲ್ಲಿ
ತರಬೇತಿ ಕಾರ್ಯಗಾರವು ದಿನಾಂಕ 25 ಜುಲೈ 2025 ರಂದು ಶುಕ್ರವಾರದಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ತರಬೇತುದಾರರಾಗಿ ಶ್ರೀ ನಾರಾಯಣ ರೈ ಕುಕ್ಕುವಳ್ಳಿ ಇವರು ವಿದ್ಯಾರ್ಥಿಗಳಿಗೆ “ಕ್ಯಾರಿಕೇಚರ್” ಎನ್ನುವ
ವಿಷಯದಲ್ಲಿ ತರಬೇತಿ ಕಾರ್ಯಗಾರವನ್ನು ನಡೆಸಿಕೊಟ್ಟರು. ಈ ಕಾರ್ಯಾಗಾರದಲ್ಲಿ ಶ್ರೀಯುತ ನಾರಾಯಣ ರೈ ಕುಕ್ಕುವಳ್ಳಿ ಇವರು
ಕಲೆ ಎಂದರೇನು? ಬದುಕಿನಲ್ಲಿ ವ್ಯಂಗ್ಯ ಚಿತ್ರಗಳ ಮಹತ್ವವನ್ನು ತಿಳಿಸಿಕೊಡುವುದರ ಜೊತೆಗೆ ಕಲೆಯ ಬಗೆಗಿನ ಮಹತ್ವವನ್ನು
ಮನಗಾಣಿಸಲು ಮತ್ತು ಸೂಕ್ತವಾದ ವಿಷಯಗಳನ್ನು ಬಳಸಿಕೊಂಡು ದೈನಂದಿನ ಬದುಕಿನಲ್ಲಿ ನಾವು ಕಾಣುವ ಸನ್ನಿವೇಶಗಳನ್ನು ಯಾವ
ರೀತಿಯಲ್ಲಿ ವ್ಯಂಗ್ಯ ಚಿತ್ರಗಳ ಮೂಲಕ ತೋರಿಸಬಹುದು ಎಂದು ತಿಳಿಸಿಕೊಟ್ಟರು.
ಜುಲೈ 25,2025 ಶುಕ್ರವಾರ ವ್ಯಂಗ್ಯ ಚಿತ್ರ ಕಾರ್ಯಾಗಾರಕ್ಕೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಕಲಾವಿಭಾಗದ
ಉಪನ್ಯಾಸಕರ ಸ್ವಾಗತ ಆತ್ಮೀಯತೆ ಮನಸೂರೆಗೊಂಡಿತು. 65ಆಸಕ್ತ ವಿದ್ಯಾರ್ಥಿ ಕಲಾವಿದರು,ಪ್ರಾಂಶುಪಾಲರು ಸೇರಿದಂತೆ
ಉಪನ್ಯಾಸಕರು ಸುಮಾರು ಒಂದೂವರೆ ಗಂಟೆಗಳ ಕಾಲ ಭಾಗವಹಿಸಿರುವುದು, ನನ್ನ ವಿದ್ಯಾರ್ಥಿ, ಶೈಕ್ಷಣಿಕ ಕಾಲಗಳನ್ನು ನೆನಪಿಸಿತು.
ಮಾನ್ಯ ಪ್ರಾಶುಪಾಲರು ಸ್ವತಃ ವ್ಯಂಗ್ಯ ಚಿತ್ರ ಆಸಕ್ತರಾಗಿದ್ದು, 2025ಜನವರಿಯಲ್ಲಿ ಜರುಗಿದ ಸುದ್ದಿ ಸಸ್ಯ ಜಾತ್ರೆಯಲ್ಲಿ,ವ್ಯಂಗ್ಯ
ಚಿತ್ರದಲ್ಲಿ ಪ್ರಥಮ ಬಹುಮಾನ ವಿಜೇತರಾಗಿದ್ದವರು, ವಿದ್ಯಾರ್ಥಿಗಳೂ ಕಲಿಕೆಯೊಂದಿಗೆ ಬೇರೆಬೇರೆ ಹವ್ಯಾಸಗಳನ್ನು
ಮೈಗೂಡಿಸಿಕೊಳ್ಳಬೇಕೆಂದೂ, ವ್ಯಂಗ್ಯ ಚಿತ್ರಗಳ ಮಹತ್ವವನ್ನೂ ತಿಳಿಸಿದರು.
. ಕು. ಬಿಂದು ಪ್ರಾರ್ಥಿಸಿದರು, ಕು. ದೀಕ್ಷಿತಾ ಸ್ವಾಗತಿಸಿದರು, ಉಪನ್ಯಾಸಕಿ ಧನ್ಯಶ್ರೀ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಉಪನ್ಯಾಸಕಿ ಜನಿತಾ ಪರಿಚಯಿಸಿದರು, ದೀಪ ಪ್ರಜ್ವಲನದೊಂದಿಗೆ ವ್ಯಂಗ್ಯ ಚಿತ್ರ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.
ಕೊನೆಯಲ್ಲಿ ಪ್ರಾಂಶುಪಾಲರು ಶ್ರೀ ಸಂಪತ್ ಕೆ. ಪಕ್ಕಳ ಅಧ್ಯಕ್ಷತೆಯ ಮಾತುಗಳನ್ನಾಡಿದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು
ಶ್ರೀ ಜಯಂತ ನಡುಬೈಲು ಆಗಮಿಸಿ ಸ್ಮರಣಿಕೆ ನೀಡಿ ಅಭಿನಂದಿಸಿದರು. ಕು. ಸ್ಪಂದನಾ ಅವರ ಧನ್ಯವಾದಗಳೊಂದಿಗೆ ಕಾರ್ಯಕ್ರಮ
ಸ್ಮರಣೀಯವಾಗಿ ನಡೆಯಿತು. ವಿದ್ಯಾರ್ಥಿಗಳೇ ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸಿ ನಿರ್ವಹಿಸಿರುವುದು ಅಭಿನಂದನೀಯ. ಒಟ್ಟಿನಲ್ಲಿ
ಒಂದು ಉತ್ತಮ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಧನ್ಯಥಾ ಭಾವಗಳೊಂದಿಗೆ ಹಸಿರು ನೆನಪುಗಳೊಂದಿಗೆ ಉತ್ತಮ ಫಲಿತಾಂಶ
ದಾಖಲಿಸಲೆಂದು ಶುಭ ಹಾರೈಸಿ ಹೊರಟಿದ್ದು ಸ್ಮರಣೀಯ” ಎಂಬುವುದಾಗಿ ಅಕ್ಷಯ ಕಾಲೇಜುನ ಬಗೆಗಿನ ತಮ್ಮ ಮೆಚ್ಚುಗೆಯನ್ನು
ವ್ಯಕ್ತಪಡಿಸಿದರು.