2012 ನೇ ಸಾಲಿನಲ್ಲಿ ಮಾಣಿ ಮೈಸೂರು ರಾಜ್ಯ ಹೆದ್ದಾರಿ 88 ರ ರಸ್ತೆ ಅಗಲೀಕರಣಕ್ಕಾಗಿ ನಡೆದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪುತ್ತೂರು ತಾಲೂಕು ಕಬಕ ಪೇಟೆಯಲ್ಲಿ ಕರ್ನಾಟಕ ಸರ್ಕಾರವು ಭೂಸ್ವಾಧೀನ ಪಡಿಸಿದ ಭೂಮಿಗೆ ಸೂಕ್ತ ಪರಿಹಾರ ಪಾವತಿಸುವಂತೆ ಪುತ್ತೂರಿನ ಮಾನ್ಯ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು LAC no. 7/2013 ರಲ್ಲಿ ಆದೇಶ ಮಾಡಿತ್ತು.
ಸದ್ರಿ ಆದೇಶದಂತೆ ಪುತ್ತೂರಿನ ಪರ್ಲಡ್ಕ ನಿವಾಸಿ ಶಿವಶಂಕರ ಭಟ್ ರವರಿಗೆ ದಿನಾಂಕ ಸುಮಾರು ರೂಪಾಯಿ 14,93,438.00 ಪಾವತಿಸಬೇಕಾಗಿದ್ದು.. ಅದನ್ನು ಪಾವತಿಸದ ಕಾರಣ ಸದ್ರಿ ಭೂಮಾಲಕರು ಪುತ್ತೂರಿನ ಮಾನ್ಯ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಅಮಲ್ಜಾರಿ ಸಂಖ್ಯೆ 6/2024 ರಂತೆ ಅರ್ಜಿ ಸಲ್ಲಿಸಿರುತ್ತಾರೆ.
ಭೂಸ್ವಾಧೀನ ಪ್ರಾಧಿಕಾರವಾದ ಮಾನ್ಯ ಸಹಾಯಕ ಆಯುಕ್ತರು ಪುತ್ತೂರು ರವರಿಗೆ ಸಾಕಷ್ಟು ಸಮಯಾವಕಾಶ ನೀಡಿದರೂ ಪರಿಹಾರ ಮೊತ್ತ ಪಾವತಿಸದ ಕಾರಣ ಪುತ್ತೂರಿನ ಮಾನ್ಯ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು ಸಹಾಯಕ ಆಯುಕ್ತರ ಕಚೇರಿಯ ಚರ ಸ್ವತ್ತುಗಳಾದ ಕಂಪ್ಯೂಟರ್ ಗಳು, ಟೇಬಲ್,ಕುರ್ಚಿ ಗಳು ಹಾಗೂ ಸಹಾಯಕ ಆಯುಕ್ತರ ವಾಹನವನ್ನು ಜಪ್ತಿ ಮಾಡಲು ಆದೇಶ ಹೊರಡಿಸಿರುತ್ತಾರೆ.
ಅದರಂತೆ ಮಾನ್ಯ ನ್ಯಾಯಾಲಯದ ಅಮೀನರು ಶ್ರೀ ಗಣೇಶ್ ಹಾಗೂ ಶ್ರೀ ಸಂಜೀವ ನ್ಯಾಯಾಲಯದ ಆದೇಶ ದಂತೆ ಸದ್ರಿ ಸೊತ್ತುಗಳ ಜಪ್ತಿಗೆ ಕ್ರಮ ಕೈಗೊಂಡಿರುತ್ತಾರೆ.
ಈ ಪ್ರಕರಣವನ್ನು ಭೂಮಾಲಕರ ಪರವಾಗಿ ನ್ಯಾಯವಾದಿಗಳಾದ
ಶ್ರೀ ಶಿವಪ್ರಸಾದ್ .E ಹಾಗೂ ಶ್ರೀ ಗೌರೀಶ್ ಕಂಪ ವಾದ ಮಂಡಿಸಿದ್ದರು