ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಗಾಗಿ ಎಸ್‌ಐಟಿ ಅಧಿಕಾರಿಗಳು ಸಹಾಯವಾಣಿ ತೆರೆದಿದ್ದಾರೆ.
ಕದ್ರಿ ಮಲ್ಲಿಕಟ್ಟೆಯ ನಿರೀಕ್ಷಣಾ ಮಂದಿರದಲ್ಲಿ SIT ಕಚೇರಿ ನಿರ್ಮಾಣ ಮಾಡಲಾಗಿದೆ. ಪ್ರಕರಣದ ತನಿಖೆಗಾಗಿ ಈಗಾಗಲೇ ವಿಶೇಷ ತನಿಖಾ ತಂಡವನ್ನು ರಚಿಸಲಾಗಿರುತ್ತದೆ. ವಿಶೇಷ ತನಿಖಾ ತಂಡವು (SIT) ಮಂಗಳೂರು ನಗರದಲ್ಲಿ ಕಚೇರಿಯನ್ನು ಸ್ಥಾಪಿಸಿರುತ್ತದೆ.
ಈ ಪ್ರಕರಣದ ಬಗ್ಗೆ SITಯನ್ನು ಸಂಪರ್ಕಿಸಲು ಅಥವಾ ಮಾಹಿತಿ ನೀಡಲು SIT ತಂಡವನ್ನು ಈ ಕೆಳಕಂಡಂತೆ ಸಂಪರ್ಕಿಸಬಹುದಾಗಿದೆ ಎಂದಿದೆ. ಇದರ ಜೊತೆಗೆ ಎಸ್‌ಐಟಿ ಸಂಪರ್ಕ ಮಾಡಲು 0824-2005301 ಫೋನ್ ನಂಬರ್ ಕೊಡಲಾಗಿದೆ. ಅಲ್ಲದೇ SIT ತಂಡ ವಾಟ್ಸಾಪ್ ನಂಬರ್ 8277986369 ಬಿಡುಗಡೆ ಮಾಡಿದೆ. ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯೊಳಗೆ ಸಂಪರ್ಕಕ್ಕಿಸಲು SIT ಮನವಿ ಮಾಡಿಕೊಂಡಿದೆ. ಹೆಚ್ಚಿನ ಸಂಪರ್ಕಕ್ಕಾಗಿ ಇ-ಮೇಲ್ ಐಡಿ sitdps@ksp.gov.in ಕೂಡ ನೀಡಲಾಗಿದೆ.