ದಾರಂದಕುಕ್ಕು: ದಿನಾಂಕ 27-07-2025, ಆದಿತ್ಯವಾರ – ವೀರ ಮಾರುತಿ ಫ್ರೆಂಡ್ಸ್ ದಾರಂದಕುಕ್ಕು ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭವು ದಾರಂದಕುಕ್ಕು ಬೀರಿಗ ಜಗದೀಶ್ ಅವರ ನಿವಾಸದಲ್ಲಿ ಭಾವಪೂರ್ಣವಾಗಿ ನಡೆಯಿತು.
ಕಾರ್ಯಕ್ರಮವನ್ನು ನಾಗೇಶ್ ಟಿ ಎಸ್ ನಿರೂಪಿಸಿದರು, ವರುಣ್ ಕೌಡಿಚಾರ್ ಸಂಘ ನೋಂದಾವಣೆ ಬಗ್ಗೆ ಮಾಹಿತಿ ಹಚಿಕೊಂಡರು
ಅಧ್ಯಕ್ಷರಾಗಿ ಮನೋಜ್ ದಾರಂದಕುಕ್ಕು ಅವರನ್ನು ಆಯ್ಕೆ ಮಾಡಲಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಚಿಕ್ಕಮೂಡ್ನೂರು, ಜೊತೆಗೆ ಕಾರ್ಯದರ್ಶಿಯಾಗಿ ದಯಾನಂದ ಮೇರ್ಲ, ಕೋಶಾಧಿಕಾರಿಯಾಗಿ ಯೋಗೀಶ್ ಮೇರ್ಲ, ಉಪಾಧ್ಯಕ್ಷರಾಗಿ ಚಿದಾನಂದ ಬೀರಿಗ ಮತ್ತು ಜಗದೀಶ್ ಬೀರಿಗ, ಗೌರವಾಧ್ಯಕ್ಷರಾಗಿ ತಿಮ್ಮಪ್ಪ ಪುಳುವಾರು, ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ನವೀನ್ ಕಂಜೂರು ಅವರನ್ನು ಆಯ್ಕೆ ಮಾಡಲಾಯಿತು.
ಸಂಘದ ಹಳೆಯ ಪದಾಧಿಕಾರಿಗಳು ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸಿದ ಬಗ್ಗೆ ಸಭೆಯಲ್ಲಿ ಧನ್ಯವಾದಗಳು ಸಲ್ಲಿಸಲಾಯಿತು. ಹೊಸ ಪದಾಧಿಕಾರಿಗಳು ಸಂಘದ ಉದ್ದೇಶಗಳನ್ನು ಮುಂದುವರೆಸಿ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲಿದ್ದಾರೆ ಎಂದು ಆಶವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಸಂಘದ ಹಲವಾರು ಸದಸ್ಯರು, ಹಿರಿಯರು ಹಾಗೂ ಯುವಕರ ಉಪಸ್ಥಿತಿಯಿಂದ ಕಾರ್ಯಕ್ರಮಕ್ಕೆ ಶೋಭೆ ಹೆಚ್ಚಾಯಿತು.