ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪಕ್ಕೆ ಸಾಕ್ಷಿ ಸಿಕ್ತಾ ಅನ್ನೋ ಪ್ರಶ್ನೆಗಳು ಹಬ್ಬಿವೆ. ಪಾಯಿಂಟ್-6ರಲ್ಲಿ ತನಿಖೆಗೆ ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದು, ದೂರುದಾರ ಮಾರ್ಕ್ ಮಾಡಿದ್ದ ಸ್ಥಳದಲ್ಲಿ ಮಾನವ ದೇಹದ ಮೂಳೆಗಳು ಸಿಕ್ಕಿವೆ. ಸದ್ಯ ಅವಶೇಷಗಳು ಸಿಕ್ಕ ಸ್ಥಳಕ್ಕೆ SIT ಹೆಚ್ಚಿನ ಭದ್ರತೆ ಕ್ರಮ ಕೈಗೊಂಡಿದ್ದು, 4 ದಿಕ್ಕಿನಲ್ಲಿ ಶೀಟ್ ಹಾಕಿ ಸಾಕ್ಷಿ ನಾಶ ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಪಾಯಿಂಟ್ 1ರಲ್ಲಿ ಪತ್ತೆಯಾಗಿದ್ದ ಡೆಬಿಟ್ ಹಾಗು ಪಾನ್ ಕಾರ್ಡ್ಗೆ ಬೇರೆಯದ್ದೆ ತಿರುವು ಸಿಕ್ಕಿದೆ.. ಅನಾರೋಗ್ಯದಿಂದ ಪಾನ್ ಕಾರ್ಡ್ ವಾರಸುದಾರ ನೆಲಮಂಗಲ ನಿವಾಸಿ ಸುರೇಶ್ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಡೆಬಿಟ್ ಕಾರ್ಡ್ ಸಾವಿಗೀಡಾದ ವ್ಯಕ್ತಿಯ ತಾಯಿಗೆ ಸೇರಿದ್ದು ಆಕೆ ಜೀವಂತ ಇದ್ದಾರೆಂಬ ಮಾಹಿತಿ ಲಭ್ಯ ಆಗಿದೆ.. ಮಹಿಳೆಯನ್ನ ಸಂಪರ್ಕಿಸಿದ SIT, ಡೆಬಿಟ್ ಕಾರ್ಡ್ ಬಳಕೆದಾರರ ಮಾಹಿತಿ ಖಚಿತ ಪಡಿಸಿಕೊಂಡಿದೆ. ಡೆಬಿಟ್ ಕಾರ್ಡ್ ಹಾಗು ಪಾನ್ ಕಾರ್ಡ್ ಕುರಿತು ಎದ್ದಿದ್ದ ಎಲ್ಲಾ ಉಹಾಪೋಹಗಳಿಗೆ ತೆರೆ ಎಳೆದಿದೆ.
ಧರ್ಮಸ್ಥಳದ ಉಳಿವಿಗಾಗಿ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಗಚ್ಚಿನ ಮಠದಲ್ಲಿ ನೂರಾರು ಭಕ್ತರಿಂದ ವಿಶೇಷ ಹೋಮ, ಹವನ ನಡೆಯುತ್ತಿದೆ.


























