ಪುತ್ತೂರು : ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರಿನಿಂದ ಮುಡಿಪಿನಡ್ಕ ಸಂಪರ್ಕ ರಸ್ತೆಯ ಪಾಪೆಮಜಲು ಬಳಿ ಶುಕ್ರವಾರ ರಾತ್ರಿ ರಿಕ್ಷಾ ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಆತ ಮೃತಪಟ್ಟ ಘಟನೆ ಸಂಭವಿಸಿದೆ.
ಸುಭಾಷ್ ಕುಲಾಲ್ (50) ಮೃತರು. ಕೌಡಿಚ್ಚಾರಿನಲ್ಲಿ ದುರ್ಗಾಪ್ರಸಾದ್ ಹೆಸರಿನ ಹೊಟೇಲ್ ನಡೆಸುತ್ತಿದ್ದ ಇವರು ರಾತ್ರಿ ಹೊಟೇಲ್ ಕೆಲಸ ಮುಗಿಸಿ ಪಾಪೆಮಜಲು ಕಡೆಗೆ ರಿಕ್ಷಾದಲ್ಲಿ ತೆರಳುತ್ತಿದ್ದರು. ಪಾಪೆಮಜಲು ಬಳಿ ಇಳಿದು ರಸ್ತೆ ದಾಟುತ್ತಿದ್ದ ವೇಳೆ ರಿಕ್ಷಾವೊಂದು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಢಿಕ್ಕಿ ಹೊಡೆದ ರಿಕ್ಷಾದ ಚಾಲಕ, ಮಹಿಳೆ ಗಾಯಗೊಂಡಿದ್ದಾರೆ. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.