ಪುತ್ತೂರು :ರೋಟರಿ ಕ್ಲಬ್ ಪುತ್ತೂರು ಯುವ ಮತ್ತು ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಸಂಯುಕ್ತ ಆಶ್ರಯದಲ್ಲಿ ಈ ವರ್ಷದ ಮೊದಲ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ – ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಯಶಸ್ವಿಯಾಗಿ ನಡೆಯಿತು.
ಮುಖ್ಯ ಅತಿಥಿಯಾಗಿ ಪುತ್ತೂರು ಸಂಚಾರ ಠಾಣೆಯ ಎಸ್ಐ ಶ್ರೀ ಉದಯ್ ರವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಎಎಸ್‌ಐ ಚಿದಾನಂದ ರೈ ಮತ್ತು ಸಂಚಾರಿ ಠಾಣಾಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಅಭಿಯಾನದಲ್ಲಿ ಪುತ್ತೂರಿನ ಆಟೋ ಚಾಲಕರು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸಲಾಗಿದ್ದು, ರಸ್ತೆ ಸುರಕ್ಷತಾ ನಿಯಮಗಳ ಮಹತ್ವವನ್ನು ತಿಳಿಸಲು ಜಾಗೃತಿ ಮೂಡಿಸಲಾಯಿತು.
ಅಧ್ಯಕ್ಷ ರೋ ಕುಸುಮ್ ರಾಜ್ ಸ್ವಾಗತಿಸಿದರು
ಕಾರ್ಯದರ್ಶಿ ರೋ ಅಬೀಶ್ ವಂದಿಸಿದರು.
ರೋಟರಿ ಸದಸ್ಯರಾದ ಸುದರ್ಶನ್ ರೈ, ಹರಿಪ್ರಸಾದ್ ರೈ, ಸಾಯಿರಾಂ ಮತ್ತು ಶಿವಪ್ರಕಾಶ್ ತಮ್ಮ ಸಕ್ರೀಯ ಸಹಕಾರ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.
ಈ ಜನಜಾಗೃತಿ ಅಭಿಯಾನವು ಸಾರ್ವಜನಿಕರಲ್ಲಿ ಸುರಕ್ಷಿತ ಸಂಚಾರದ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಭಾವಶಾಲಿ ಹೆಜ್ಜೆಯಾಗಿ ಪರಿಣಮಿಸಿದೆ.