ಎರಡು ವಿಭಾಗದಲ್ಲಿ ನಡೆಯಲಿರುವ ಸ್ಪರ್ಧೆಗೆ ಹೆಸರು ನೋಂದಾಯಿಸಲು 07.08.2025 ಕೊನೆಯ ದಿನಾಂಕ
ಜೆಸಿಐ ಪುತ್ತೂರು, ನಂದಗೋಕುಲ ಚಿಣ್ಣರ ಅಂಗಳ ಇದರ ಜಂಟೀ ಆಶ್ರಯದಲ್ಲಿ ಸ್ಪರ್ಧೆ ಆಯೋಜಿಸಿದ ವಿದ್ಯಾಮಾತಾ ಅಕಾಡೆಮಿ
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿ, ಜೆಸಿಐ ಪುತ್ತೂರು ಹಾಗೂ ಚಿಣ್ಣರ ಅಂಗಳ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ವಿದ್ಯಾಮಾತಾ ಅಕಾಡೆಮಿ ಪುತ್ತೂರು ಇಲ್ಲಿ ದಿನಾಂಕ 10.08.2025 ಆದಿತ್ಯವಾರದಂದು ಬೆಳಿಗ್ಗೆ 10 ಗಂಟೆಯಿಂದ ಕೃಷ್ಣ ವೇಷ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯು ಎರಡು ವಿಭಾಗದಲ್ಲಿ ನಡೆಯಲಿದ್ದು, 01ವರ್ಷದಿಂದ 03ವರ್ಷದೊಳಗಿನ ಮಕ್ಕಳು ಹಾಗೂ 03ವರ್ಷದಿಂದ 06ವರ್ಷದೊಳಗಿನ ಮಕ್ಕಳಿಗೆ ಸ್ಪರ್ಧೆ ಆಯೋಜನೆಗೊಂಡಿದೆ.
ಪ್ರಥಮ ಬಹುಮಾನವಾಗಿ 3000₹, ದ್ವಿತೀಯ ಬಹುಮಾನ 2000₹, ತೃತೀಯ ಬಹುಮಾನ 1000₹ ದೊರೆಯಲಿದೆ.
ಅಲ್ಲದೇ ಭಾಗವಹಿಸುವ ಎಲ್ಲಾ ಮುದ್ದು ಮಕ್ಕಳಿಗೆ ಪ್ರಮಾಣ ಪತ್ರ ಮತ್ತು ಪದಕ ನೀಡಲಾಗುವುದು. ಎರಡೂ ವಿಭಾಗಗಳಿಗೂ ಪ್ರತ್ಯೇಕವಾಗಿ ಬಹುಮಾನಗಳನ್ನು ನೀಡಲಾಗುತ್ತದೆ, ಸ್ಪರ್ಧೆಗೆ ಹಾಜರಾಗುವ ಸಂದರ್ಭದಲ್ಲಿ ಮಗುವಿನ ಆಧಾರ್ ಕಾರ್ಡ್ ಜೆರಾಕ್ಸ್ ಮತ್ತು ಒಂದು ಭಾವಚಿತ್ರ ಕಡ್ಡಾಯವಾಗಿ ತರತಕ್ಕದ್ದು, ಹೆಸರನ್ನು ಈ ಕೆಳಗಿನ ಸಂಖ್ಯೆಗೆ ದಿನಾಂಕ 07.08.2025 ರ ಒಳಗಡೆ ಕರೆಯ ಮೂಲಕ ನೋಂದಾಯಿಸಲು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿ ಮತ್ತು ಹೆಸರನ್ನು ನೋಂದಾಯಿಸಲು ಕರೆಮಾಡಿ : 8105556656, 8590773486