ವಿಟ್ಲ: ಬ್ರೇಕ್ ಫೈಲ್ ಆಗಿ ಖಾಸಗಿ ಬಸ್ಸೊಂದು ಕಾಂಪೌಂಡ್ ಗೆ ಗುದ್ದಿದ ಘಟನೆ ವಿಟ್ಲ ದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ನಡೆದಿದೆ.
ವಿಟ್ಲದಿಂದ ಕನ್ಯಾನಕ್ಕೆ ಹೋಗುತ್ತಿದ್ದ ಬಸ್ ಬ್ರೇಕ್ ಫೈಲ್ ಆಗಿ ಕಾಂಪೌಂಡ್ ಗೆ ಗುದ್ದಿದೆ ಪರಿಣಾಮ ಕಾಂಪೌಂಡ್ ಜರಿದು ಬಿದ್ದಿದ್ದು ಬಸ್ ಮುಂಭಾಗ ಸಂಪೂರ್ಣ ಜಖಂ ಗೊಂಡಿದೆ. ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.