ಪೊಲೀಸ್ ಇಲಾಖೆ ಪುತ್ತೂರು ನೇತೃತ್ವದಲ್ಲಿ ನಾವು ಭಾರತೀಯರು ಎನ್ನುವ ಭಾವ ಜಾಗೃತಿಗಾಗಿ ಇಂಡಿಪೆಂಡೆನ್ಸ್ ಕ್ವಿಜ್ 2025 ರ ಕಾರ್ಯಕ್ರಮವನ್ನು ಲಿಟ್ಲ್ ಫ್ಲವರ್ ಶಾಲೆ ದರ್ಬೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. .
ಪುತ್ತೂರು ನಗರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ರಾದ ಶ್ರೀ ಆಂಜನೇಯ ರೆಡ್ಡಿ ರಾಷ್ಟ್ರ ಧ್ವಜ ಎತ್ತಿ ಹಿಡಿದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಪುತ್ತೂರು ನಗರ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶಶಿಕಲಾ, ನಯ ಚಪ್ಪಲ್ ಬಜಾರ್ ಮಾಲಕರಾದ ರೊ.ಅಬ್ದುಲ್ ರಫೀಕ್,ಪ್ರಥಮ ದರ್ಜೆ ಗುತ್ತಿಗೆದಾರರು ಬಿ.ಜಿ. ಕನ್ಸ್ಟ್ರಕ್ಷನ್ಸ್ ಮಾಲಕರಾದ ಜುನೈದ್, ಪುತ್ತೂರು ನಗರ ಠಾಣೆಯ ಎ. ಎಸ್. ಐ. ಶ್ರೀ ಗಂಗಾಧರ್, ಅಮರ್ ಅಕ್ಬರ್ ಅಂತೋನಿ ರೋಲಿಂಗ್ ಟ್ರೋಫಿ ಸಂಸ್ಥಾಪಕರಾದ ಬಿ ಎಚ್ ಅಬ್ದುಲ್ ರಝಕ್, ಪ್ರೇಮ್ ಡೆಕೋರ್ ಮಾಲಕರಾದ ಇಬ್ರಾಹಿಂ,ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್.ಹಿರಿಯ ಶಿಕ್ಷಕಿ ವಿಲ್ಮಾ ಫೆರ್ನಾಂಡಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುತ್ತೂರು ನಗರ ಶಾಲೆಯ ಶಾಲಾ ಮಕ್ಕಳಿಗೆ ಸ್ವಾತಂತ್ರ್ಯದ ಹೋರಾಟದ ಹಾದಿಯನ್ನು ಪರಿಚಯಿಸುವ ಕುರಿತ ಇಂಡಿಪೆಂಡೆನ್ಸ್ ಕ್ವಿಜ್ ನಡೆಸಲಾಯಿತು.ಡಾ.ಶಿವರಾಮ ಕಾರಂತ ಪ್ರೌಢಶಾಲೆ,
ಸರಕಾರಿ ಪ್ರೌಢಶಾಲೆ ಕೊಂಬೆಟ್ಟು
ಸುದಾನ ವಸತಿಯುತ ಶಾಲೆ ಮಂಜಲ್ಪಡ್ಪು,
ಅಂಬಿಕಾ ವಿದ್ಯಾಲಯ ಬಪ್ಪಳಿಗೆ,
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ,
ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ,
ಮಾಯಿದೆ ದೇವುಸ್ ಪುತ್ತೂರು, ಲಿಟ್ಲ್ ಫ್ಲವರ್ ದರ್ಬೆ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ,ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ ಭಾಗವಹಿಸಿದವು.
ಹತ್ತು ಸುತ್ತುಗಳಲ್ಲಿ ನಡೆದ ಇಂಡಿಪೆಂಡೆನ್ಸ್ ಕ್ವಿಜ್ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪ್ರಥಮ, ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆ ದ್ವಿತೀಯ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೃತೀಯ, ಸರಕಾರಿ ಪ್ರೌಢಶಾಲೆ ಕೊಂಬೆಟ್ಟು ಚತುರ್ಥ ಸ್ಥಾನ ಪಡೆಯಿತು. ಭಾಗವಹಿಸಿದ ಮಕ್ಕಳಿಗೆ ನಯ ಚಪ್ಪಲ್ ಬಜಾರ್ ವತಿಯಿಂದ ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು.ನೆರವೇರಿತು.ಪುತ್ತೂರು ನಗರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ರಾದ ಶ್ರೀ ಆಂಜನೇಯ ರೆಡ್ಡಿ ಹಾಗೂ ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕ್ವಿಜ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿಯರಾದ ನಳಿನಾಕ್ಷಿ, ದಿವ್ಯಾ, ಭವ್ಯ, ಜೋಸ್ಲಿನ್ ಪಾಯಸ್, ಲವೀನಾ ಪಸನ್ನ ಸಹಕರಿಸಿದರು.