ಪುತ್ತೂರು: ರೋಟರಿಪುರ ನಿವಾಸಿ ಚಾರ್ಲ್ಸ್ ಲೋಬೊ(75) ರವರು ಹೃದಯಾಘಾತದಿಂದ ಆ.3 ರಂದು ಮುಂಜಾನೆ ನಿಧನ ಹೊಂದಿದ್ದಾರೆ.
ಮೃತ ಚಾರ್ಲ್ ಲೋಬೊರವರು ಸಚಿನ್ ಟ್ರೇಡಿಂಗ್ ನಲ್ಲಿ ಹಾಗೂ ಎಂ.ಟಿ ರೋಡ್ ನಲ್ಲಿನ ಪೂಜಾ ಹೋಟೇಲ್ ನಲ್ಲಿ – ಹಲವಾರು ವರ್ಷ ಕ್ಯಾಶಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಮೃತರು ಪತ್ನಿ ಗ್ರೇಸಿ ಲೋಬೊ, ಪುತ್ರರಾದ ಮೆಲ್ವಿನ್ ಲೋಬೊ, ಜೋಯಲ್ ಲೋಬೊ, ಜೋಯಿಸ್ಟನ್ ಲೋಬೊ, ಸೋನಲ್ ಲೋಬೊ, ಪುತ್ರಿ ಜೋಯ್ಲಿನ್ ಲೋಬೊ, ಅಳಿಯ ಜೇಸನ್ ಮೊಂತೇರೊ, ಸೊಸೆಯಂದಿರಾದ ಪ್ರೀಮಾ ಲೋಬೊ, ಡೀನಾ ಲೋಬೊ, ಮೊಮ್ಮಕ್ಕಳನ್ನು ಅಗಲಿದ್ದಾರೆ.