ಬೆಳ್ತಂಗಡಿ ಇಚಿಲಂಪಾಡಿ ನಿವಾಸಿ ಜಯಂತ್ ಎಂಬವರು ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಘಟನೆಗೆ ಸಂಬಂಧಿಸಿದಂತೆ, ದೂರು ನೀಡಲು ಎಸ್.ಐ.ಟಿ ಬೆಳ್ತಂಗಡಿ ಕಛೇರಿಗೆ ಹೋಗಿದ್ದು, ಈ ವೇಳೆ ಸದ್ರಿ ದೂರನ್ನು ಪರಿಶೀಲಿಸಿದ ಅಧಿಕಾರಿಗಳು, ದೂರನ್ನು ಸೂಕ್ತಕ್ರಮಕ್ಕಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನೀಡುವಂತೆ ತಿಳಿಸಿರುತ್ತಾರೆ. ಅದರಂತೆ ದೂರುದಾರರು ದಿನಾಂಕ:04.08.2025 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನೀಡಿದ ದೂರರ್ಜಿಯನ್ನು 200/DPS/2025 ರಂತೆ ಸ್ವೀಕರಿಸಿಕೊಂಡಿದ್ದು, ಸದ್ರಿ ದೂರರ್ಜಿಯ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.