ಪ್ರತಿಷ್ಠಿತ ಅಂತರಾಷ್ಟ್ರೀಯ ತರಬೇತಿ ಸಂಸ್ಥೆಯಾದ ಜೆಸಿ ಭಾರತ ಇದರ ಪುತ್ತೂರು ಘಟಕಕ್ಕೆ ಜೆಸಿಐ ರಾಷ್ಟ್ರೀಯ ಅಧ್ಯಕ್ಷರಾದ JFS ಅಂಕುರ್ ಜುನ್ ಜುನ್ ವಾಲರವರು ದಿನಾಂಕ 5/8/2025ರಂದು ಅಧಿಕೃತ ಭೇಟಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸಾಮೆತಡ್ಕ ಪುತ್ತೂರು ಇಲ್ಲಿಗೆ ಆಗಮಿಸಿದ್ದ ಶ್ರೀಯುತರು ಜೆಸಿಐ ಸಂಸ್ಥೆಯ ಪ್ರಯತ್ನದಿಂದ ಎನ್.ಎಂ.ಪಿ.ಎ., ಸಿ.ಎಸ್.ಆರ್ ಫಂಡ್ ಮೂಲಕ ನಿರ್ಮಾಣವಾಗುತ್ತಿರುವ ಶಾಲಾ-ಕೊಠಡಿಯನ್ನು ಪರಿಶೀಲಿಸಿ ಶಾಲಾ ಉದ್ಯಾನವನದಲ್ಲಿ ಗಿಡ ನೆಟ್ಟರು.

ಈ ಸಂದರ್ಭದಲ್ಲಿ ಶಾಲೆಗೆ ಜೆಸಿಐ ಪುತ್ತೂರು ಘಟಕದ ವತಿಯಿಂದ ತ್ಯಾಜ್ಯ ವಿಂಗಡಣಾ ತೊಟ್ಟಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಅಲ್ಲದೆ ಶಾಲೆಗೆ ಮಾರ್ಗಸೂಚಿ ಫಲಕವನ್ನು ನೀಡಲಾಗಿದ್ದು, ಅದನ್ನು ಉದ್ಘಾಟಿಸಿದರು.


ನಂತರ ಪುತ್ತೂರಿನ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೊಂಬು ವಾದನದೊಂದಿಗೆ ಆರತಿ ಬೆಳಗಿ ವಿದ್ಯಾರ್ಥಿಗಳು ಅವರನ್ನು ಬರಮಾಡಿಕೊಂಡರು. ಜೆಸಿಐ ಪುತ್ತೂರು ಹಾಗೂ ವಿದ್ಯಾಮಾತಾ ಅಕಾಡೆಮಿಯ ವತಿಯಿಂದ ರಾಷ್ಟ್ರೀಯ ಅಧ್ಯಕ್ಷರಿಗೆ ಗೌರವ ಸಮರ್ಪಣೆ ನಡೆಯಿತು. ವಿದ್ಯಾಮಾತಾ ಅಕಾಡೆಮಿ, ಜೆಸಿಐ ಪುತ್ತೂರು, ನಂದಗೋಕುಲ- ಚಿಣ್ಣರ ಅಂಗಳ ಜಂಟಿ ಆಶ್ರಯದಲ್ಲಿ ಆಗಸ್ಟ್ 10ರಂದು ನಡೆಯಲಿರುವ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಕೃಷ್ಣ ವೇಷ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಲಯ 15ರ ಅಧ್ಯಕ್ಷರಾದ ಜೆಸಿ ಅಭಿಲಾಶ್ ಬಿ.ಎ., ಪುತ್ತೂರು ಘಟಕದ ಅಧ್ಯಕ್ಷರಾದ ಭಾಗ್ಯೇಶ್ ರೈ, ವಲಯ ಉಪಾಧ್ಯಕ್ಷರಾದ ಜೆಸಿ ಸುಹಾಸ್ ಮರಿಕೆ, ಜೆಸಿ ಸಂತೋಷ್ ಶೆಟ್ಟಿ ಮತ್ತು ಅಶ್ವಿನಿ ಐತಾಳ್, ಪೂರ್ವಾ ರಾಷ್ಟ್ರೀಯ ಉಪಾಧ್ಯಕ್ಷರುಗಳಾದ ಜೆಸಿ ಮುರಳಿ ಶ್ಯಾಮ್, ಜೆಸಿ ಪುರಂದರ ರೈ ಮಿತ್ರಂಪಾಡಿ, ಪೂರ್ವ ಅಧ್ಯಕ್ಷರಾದ ಜೆಸಿ ವಿಶ್ವಪ್ರಸಾದ್ ಸೇಡಿಯಾಪು , ಜಗನ್ನಾಥ ರೈ, ಸ್ವಾತಿ ಜಗನ್ನಾಥ ರೈ, ಶಶಿರಾಜ್ ರೈ, ನಿಕಟ ಪೂರ್ವ ಅಧ್ಯಕ್ಷರಾದ ಮೋಹನ ಕೆ, ಕಾರ್ಯದರ್ಶಿ ಮನೋಹರ ಪಾಟಳಿ, ಉಪಾಧ್ಯಕ್ಷರಾದ ಜೆಸಿ ಜಿತೇಶ್ ರೈ, ಜೆಸಿಐ ಬೆಳ್ಳಾರೆ ಘಟಕದ ಅಧ್ಯಕ್ಷರಾದ ಜೆಸಿ ಪ್ರದೀಪ್ ರೈ, ಅಲಂಕಾರು ಘಟಕದ ಅಧ್ಯಕ್ಷರಾದ ಗುರುರಾಜ್, ಜೆಜೆಸಿ ಚೇರ್ ಪರ್ಸನ್ ಸ್ವಸ್ತಿ ಶೆಟ್ಟಿ, ಘಟಕ ಆಡಳಿತ ಮಂಡಳಿಯ ಸದಸ್ಯರಾದ ಸತೀಶ್, ವಿಘ್ನೇಶ್, ಆಶಾಮೋಹನ್, ಶೋಭಾ ರೈ ಹಾಗೂ ವಿದ್ಯಾಮಾತಾ ಅಕಾಡೆಮಿಯ ತರಬೇತಿದಾರರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂತರ ಸಹಭೋಜನ ನಡೆಯಿತು.
