ಬೆಳ್ತಂಗಡಿ: ಮಂಗಳೂರಿನಲ್ಲಿ ನಡೆದ ಆಟಿದ ಕೂಟ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ದೇವರನ್ನು ನಾಟಕ ತಂಡ ಅಪಹಾಸ್ಯ ಮಾಡಿದೆ ಎಂದು ಆರೋಪಿಸಿ ಪಾತ್ರದಾರನ ಮತ್ತು ನಿರ್ದೇಶಕನ ವಿರುದ್ಧ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದೆ.
ದೂರಿನಲ್ಲಿ ಏನಿದೆ..??? ಶ್ರೀ ಕೃಷ್ಣನ ವೇಷಧಾರಿಯಾದ ‘ರವಿ ರಾಮಕುಂಜ’ ಎಂಬವರು ಹಿಂದೂಗಳ ಆರಾಧ್ಯ ದೇವರಾದ ಶ್ರೀ ಕೃಷ್ಣ ಪರಮಾತ್ಮನ ವೇಷಧರಿಸಿಕೊಂಡು ಅಶ್ಲೀಲ ಭಂಗಿ ಮತ್ತು ಅಶ್ಲೀಲ ಪದ ಕೊಳಲು ಊದುವಾಗ ಶ್ರೀ ಕೃಷ್ಣನ ಇನ್ನೊಂದು ಹೆಸರಾದ ಮುರಾರಿ ಬಗ್ಗೆ ‘ಆಯೆ ಸೈತೆ’ ಅಲ್ಲದೆ ಕೃಷ್ಣ ವೇಶಧಾರಿ ಹಾಲಿಂಗನ ಮಾಡುವುದು ಅಸಂಬದ್ಧ ಶಬ್ದಗಳೊಂದಿಗೆ ಅನಾಗರಿಕವಾಗಿ ನಟಿಸಿ, ವರ್ತಿಸಿದ್ದು ಇದು ಹಿಂದುಗಳ ಧಾರ್ಮಿಕ ಭಾವನೆಗೆ ತೀವ್ರಗಾಸಿ ಉಂಟುಮಾಡುತ್ತದೆ.
ಧಾರ್ಮಿಕ ನಂಬಿಕೆ ಮತ್ತು ಆರಾಧನೆಗೆ ಧಕ್ಕೆಯಾಗದಂತೆ ಕಾನೂನಿನಲ್ಲಿ ಉಲ್ಲೇಖವಿದ್ದರೂ ಈ ರೀತಿಯ ಘಟನೆಗಳು ಮರುಕಳಿಸುವುದರಿಂದ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿ ಸಮುದಾಯದ ಒಳಗೆ ಗಲಭೆಗಳು ಆಗುವ ಸಾಧ್ಯತೆ ಇರುತ್ತದೆ ಆದ್ದರಿಂದ ತಾವುಗಳು ಸದ್ರಿ ಕಲಾವಿದ ರವಿ ರಾಮಕುಂಜ’ ಮತ್ತು ನಿರ್ದೇಶಕ ಪುಷ್ಪರಾಜ್’ ಹಾಗೂ ಕಾರ್ಯಕ್ರಮದ ಆಯೋಜಕರಾದ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ಬೆಳ್ತಂಗಡಿಯ ಖ್ಯಾತ ನ್ಯಾಯವಾದಿ ಉದಯ ಕುಮಾರ್ ಬಿ.ಕೆ., ವಿಶ್ವ ಹಿಂದು ಪರಿಷತ್ತು ಬೆಳ್ತಂಗಡಿ ಪ್ರಖಂಡ ಸೇವಾ ಪ್ರಮುಖ್ ಮೋಹನ್ ಬೆಳ್ತಂಗಡಿ, ಸಾಮಾಜಿಕ ಹೋರಾಟಗಾರರಾದ ಕೇಶವ ಗೌಡ, ಜಗದೀಶ್, ಮೋಹನ್ ಬಂಗೇರ, ಶೇಖರ್ ಕುಲಾಲ್, ಕಮಲಾಕ್ಷ ಇನ್ನಿತರರು ಉಪಸ್ಥಿತರಿದ್ದರು.