ವಕೀಲರ ಸಂಘ(ರಿ.) ಪುತ್ತೂರು ಇದರ ವತಿಯಿಂದ ಆಟಿದ ನೆಂಪು ಕೆಸರ್ಡ್ ಗೊಬ್ಬು ಕಾರ್ಯಕ್ರಮ ಆ.09 ರಂದು ಬೆಳಗ್ಗೆ 9.30 ಕ್ಕೆ ಕಾರ್ಜಾಲು ಗದ್ದೆಯಲ್ಲಿ ನಡೆಯಲಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಧೀಶರಾದ ಜಸ್ಟಿಸ್ ಪಿ ಮಹಮ್ಮದ್ ನವಾಝ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷರಾದ ಜಗನ್ನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾನ್ಯ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸರಿತಾ ಡಿ, ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಎ.ಪಿ.ಜೆ.ಎಂ ಸಿ ಪುತ್ತೂರು ದೇವರಾಜ್ ವೈ ಎಚ್ ಭಾಗವಹಿಸಲಿದ್ದಾರೆ.
ಗೌರವ ಉಪಸ್ಥಿತಿಯಲ್ಲಿ ಮಾನ್ಯ ಪ್ರಧಾನ ವ್ಯವಹಾರಿಕ ಸಿವಿಲ್ ನ್ಯಾಯಧೀಶರಾದ ಶ್ರೀ ಶಿವಣ್ಣ ಹೆಚ್ ಆರ್ , ಮಾನ್ಯ ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶರಾದ ಯೋಗೇಂದ್ರ ಶೆಟ್ಟಿ, ಕಾರ್ಜಾಲು ದೈವಸ್ಥಾನದ ಆಡಳಿತ ಮೊಕ್ತೇಸರರಾದ ಅಜಿತ್ ಕುಮಾರ್ ಜೈನ್, ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಉದಯಶಂಕರ ಶೆಟ್ಟಿ, ಶೀನಪ್ಪ ಗೌಡ ಬೈತಡ್ಕ, ಹಿರಿಯ ವಕೀಲರಾದ ದಿವಾಕರ ಕೆ ನಿಡ್ವಣ್ಣಾಯ ಇರಲಿದ್ದಾರೆ.
ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
