ಧರ್ಮಸ್ಥಳದ ಶ್ರೀ ಮಂಜುನಾಥ, ಶ್ರೀ ಅಣ್ಣಪ್ಪ ಸ್ವಾಮಿಯ ಆರ್ಶೀವಾದ, ದೇವಳದ ಕಲ್ಯಾಣ ಯೋಜನೆಗಳಿಂದ ಬದುಕಿನಲ್ಲಿ ಏಳಿಗೆ ಕಂಡಿರುವ ಅಸಂಖ್ಯಾತ ಕುಟುಂಬಗಳು ನಮ್ಮ ನಾಡಿನಲ್ಲಿವೆ.
ಧರ್ಮ, ದೇವರ ವಿಷಯದಲ್ಲಿ ನಮ್ಮ ನಂಬಿಕೆಗಳಿಗೆ ಘಾಸಿ ಮಾಡುವ ಷಡ್ಯಂತ್ರಕ್ಕೆ ದೇಶದ ಒಳಗೆ ಹಾಗೂ ಹೊರಗಿನ ಶಕ್ತಿಗಳು ಕೈ ಹಾಕಿವೆ. ಅಂತವರಿಗೆ ನ್ಯಾಯ, ಸತ್ಯ ಮುಖ್ಯವಲ್ಲ. ಅವರಿಗೆ ನಮ್ಮ ನಂಬಿಕೆಯ ಗೋಡೆ ಶಿಥಿಲಗೊಂಡು ನಾವು ಧರ್ಮಸ್ಥಳದ ಸಾನಿಧ್ಯದಿಂದ ವಿಮುಖರಾಗುವುದು ಮಾತ್ರ ಬೇಕಾಗಿದೆ.
ನಮ್ಮ ವಿಶ್ವಾಸದ ಬುನಾದಿಯನ್ನು ಸಡಿಲಿಸಿ ಷಡ್ಯಂತ್ರಗಾರರು ಯಶಸ್ವಿಯಾಗುವುದಕ್ಕೆ ನಾವು ಬಿಡಬಾರದು. ದೈವ, ದೇವರುಗಳ ಆರ್ಶೀವಾದ ಧರ್ಮ ರಕ್ಷಕರ ಮೇಲೆ ಸದಾ ಇರಲಿದೆ.ಎಂದು ದ ಕ ಜಿಲ್ಲೆಯ ಮಾಜಿ ಸಂಸದ, ಬಿಜೆಪಿ ಯ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿದ್ದಾರೆ.