ವಿಟ್ಲದ ನಿವೃತ್ತ ದೈಹಿಕ ಶಿಕ್ಷಕ ಅನೇಕ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ಸೃಷ್ಟಿಸಿದ ದಿ.ಸುಬ್ರಾಯ ಶೆಟ್ಟಿಗಾರ್ ಅವರ ಧರ್ಮಪತ್ನಿ ಕಲ್ಯಾಣಿ ಶೆಟ್ಟಿಗಾರ್ (76 ವರ್ಷ) ಅಸೌಖ್ಯದ ಕಾರಣದಿಂದ ಇಂದು ನಿಧನರಾದರು.
ಇವರು ಮೂವರು ಪುತ್ರರುಗಳಾದ ವಿವೇಕಾನಂದ ಕಾಲೇಜಿನ ದೈಹಿಕ ನಿರ್ದೇಶಕರಾದ ರವಿಶಂಕರ್, ಮಂಗಳೂರಿನ ಬೆಸೆಂಟ್ ಕಾಲೇಜಿನ ಗ್ರಂಥಪಾಲಕ ಡಾ.ಲೋಕರಾಜ್, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಹರಿಪ್ರಸಾದ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.