ವಿಟ್ಲ: ವಿಟ್ಲದ ಅರಮನೆ ಗದ್ದೆಯಲ್ಲಿ ನಾಳೆ ಯುವ ವಾಹಿನಿ ವಿಟ್ಲ ಘಟಕ, ಬಿಲ್ಲವ ಸಂಘ ಮತ್ತು ಮಹಿಳಾ ಬಿಲ್ಲವ ಸಂಘ ವಿಟ್ಲ, ಲಯನ್ಸ್ ಕ್ಲಬ್ ವಿಟ್ಲ ಹಾಗು NSS ಘಟಕ ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ಇದರ ಸಹಯೋಗದೊಂದಿಗೆ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ನ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಮನೆ ಗದ್ದೆಯಲ್ಲಿ ಬೆಳಗ್ಗೆ 8:30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಬಿಲ್ಲವ ಸಂಘ ವಿಟ್ಲ ಘಟಕದ ಅಧ್ಯಕ್ಷ ಶ್ರೀ ಜಯಪ್ರಕಾಶ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ವಾಹಿನಿ ವಿಟ್ಲ ಘಟಕದ ಅಧ್ಯಕ್ಷ ಶ್ರೀ ಹರೀಶ್ ಪೂಜಾರಿ ಮರುವಾಳ ವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ದೀಪ ಪ್ರಜ್ವಲನೆ ಮಾಡಲಿದ್ದಾರೆ. ವಿಟ್ಲ ಅರಮನೆಯ ಶ್ರೀ ಬಂಗಾರು ಅರಸರು, ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರ ಕುಕ್ಕಾಜೆ ಇದರ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿ ಉಪಸ್ಥಿತರಿರಲಿದ್ದಾರೆ.
ಸಂಜೆ 4:30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವ ವಾಹಿನಿ ವಿಟ್ಲ ಘಟಕ ಇದರ ಅಧ್ಯಕ್ಷ ಶ್ರೀ ಹರೀಶ ಪೂಜಾರಿ ಮರುವಾಳ ವಹಿಸಲಿದ್ದಾರೆ. ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಇದರ ಜಿಲ್ಲಾಧ್ಯಕ್ಷ ಶ್ರೀ ಸತೀಶ್ ಕುಂಪಲ ಮತ್ತು ಹಿಂದೂ ಮುಖಂಡ ಶ್ರೀ ಅರುಣ್ ಕುಮಾರ್ ಪುತ್ತಿಲ ಗೌರವ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.