ಪುತ್ತೂರು: ನೆಲ್ಲಿಕಟ್ಟೆ ಮಿತ್ರಮಂಡಲ ಪುತ್ತೂರು ಇದರ ವತಿಯಿಂದ ಪ್ರಥಮ ವರ್ಷದ ‘ಕೆಸರ್‌ಡ್ ಒಂಜಿ ದಿನತ್ತ ಕುಸಲ್ಪ ಗೊಬ್ಬು’ ಆ.10 ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಶಿವನ ಮೂರ್ತಿಯ ಹತ್ತಿರ ನಡೆಯಲಿದೆ.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಉದ್ಯಮಿ ರೋಶನ್ ರೈ ಬನ್ನೂರು, ಪುತ್ತೂರು ದೇವತಾ ಸಮಿತಿ ಅಧ್ಯಕ್ಷ ಅಭಿಜಿತ್ ಶೆಟ್ಟಿ, ಈಶ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಗೋಪಾಲಕೃಷ್ಣ ಪಾಟಳಿ , ನೆಲ್ಲಿಕಟ್ಟೆ ಮಿತ್ರಮಂಡಲದ ಸಲಹೆಗಾರರಾದ ಜನಾರ್ದನ ರಾವ್, ಜಗನ್ನಾಥ ಜೋಗಿ, ಪುತ್ತೂರು , ಬಂಜಾರ ಕ್ಯಾಟರಿಂಗ್‌ನ ಗಣೇಶ್ ನಾಯ್ಕ ನೆಲ್ಲಿಕಟ್ಟೆ ಭಾಗವಹಿಸಲಿದ್ದಾರೆ.
ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ನೆಲ್ಲಿಕಟ್ಟೆ ಮಿತ್ರ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ರೈ ಸೂತ್ರಬೆಟ್ಟು, ನೆಲ್ಲಿಕಟ್ಟೆ ಮಿತ್ರಮಂಡಲದ ಸಂಚಾಲಕ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಸಾಮೆತಡ್ಕ ಸಿಜ್ಲರ್ ಗ್ರೂಪ್‌ನ ಪ್ರಸನ್ನ ಕುಮಾರ್ ಶೆಟ್ಟಿ, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು, ನೆಲ್ಲಿಕಟ್ಟೆ ಮಿತ್ರಮಂಡಲ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ವಿಘ್ನೇಶ್ ಕನ್‌ಸ್ಟ್ರಕ್ಷನ್ನ ಸಂದೀಪ್ ನೆಲ್ಲಿಕಟ್ಟೆ, ಸ್ಯಾಕ್ರೋಫೋನ್ ವಾದಕ ಪಿ.ಕೆ ಗಣೇಶ್, ರೈ ಫೈನಾನ್ಸ್‌ನ ಸೂತ್ರಬೆಟ್ಟು ಮೋಹನ್ ರೈ, ಹನುಮಾನ್ ಏಜೆನ್ಸಿಯ ದಿನೇಶ್ ರೈ, ಕರ್ನಾಟಕ ಬೀಚ್ ರನ್ನಿಂಗ್ ಕಮಿಟಿಯ ಉಪಾಧ್ಯಕ್ಷ ನಿತ್ಯಾನಂದ ಶೆಟ್ಟಿ, ನೆಲ್ಲಿಕಟ್ಟೆಮಿತ್ರಮಂಡಲದ ಪ್ರಧಾನ ಕಾರ್ಯದರ್ಶಿ ರೋಹಿತ್ ಕುಮಾರ್, ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನಾ ರೈ, ಉದ್ಯಮಿ ಭವಿನ್ ಶೇಟ್ ನೆಲ್ಲಿಕಟ್ಟೆ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದ್ದು ಮಕ್ಕಳಿಗೆ ಓಟ ಸ್ಪರ್ಧೆ, ಮಡಿಕೆ ಒಡೆಯುವುದು, ಲಿಂಬೆ ಚಮಚ ಓಟ, ಪಾಳೆ ಎಳೆಯುವುದು, ಒಂಟಿ ಕಾಲಿನ ಓಟ, ಗಂಡಸರಿಗೆ , ಮಡಿಕೆ ಒಡೆಯುವ ಸ್ಪರ್ಧೆ, ಹಿಂಬದಿ ಓಟ, ತೆಂಗಿನ ಕಾಯಿ ಬಿಸಾಡುವುದು, ಕಬಡ್ಡಿ, ಗೂಂಟ ಓಟ, ಹಗ್ಗಜಗ್ಗಾಟ, ಉಪ್ಪು ಮೂಟೆ, ಮಹಿಳೆಯರಿಗೆ ಓಟ ಸ್ಪರ್ಧೆ, ಮಡಿಕೆ ಒಡೆಯುವುದು, ಸಂಗೀತ ಕುರ್ಚಿ, ತೆಂಗಿನಕಾಯಿ ಬಿಸಾಡುವುದು, ಹಗ್ಗಜಗ್ಗಾಟ, ಉಪ್ಪು ಮೂಟೆ, ತ್ರೋಬಾಲ್ ನಿಧಿಶೋಧನೆ ಸ್ಪರ್ಧೆಗಳು ನಡೆಯಲಿದೆ.
ವಿಶೇಷ ಆಕರ್ಷಣೆಯಾಗಿ ಧರ್ಮಚಾವಡಿ ಸಿನಿಮಾ ತಂಡ ಭಾಗವಹಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.