ಮಂಗಳೂರು: ಪ್ರಿಯಾ ಅಡ್ಲಿನ್ ಡಿಸೋಜ ಎಂಬುವರ 1 ವರ್ಷ 4 ತಿಂಗಳು ಪ್ರಾಯದ ಮಗು ಜಿಯಾನ್ ಪಾವೆಲ್ ಗಂಭೀರ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು ಉಸಿರಾಡಲೂ ಕಷ್ಟಪಡುತ್ತಿದ್ದಾನೆ. ಮಗುವನ್ನು ಉಳಿಸಿಕೊಳ್ಳಲು ಶಸ್ತ್ರಚಿಕಿತ್ಸೆಯೊಂದೇ ಮಾರ್ಗವಾಗಿದ್ದು 11,24,000 ರೂ. ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಪಾಲಕರು ಈಗಾಗಲೇ ತಮ್ಮ ಸಾಮರ್ಥ್ಯ ಮೀರಿ ಖರ್ಚು ಮಾಡಿದ್ದು ಇನ್ನು ಮುಂದಿನ ಖರ್ಚಿಗಾಗಿ ದಾನಿಗಳ ನೆರವು ಯಾಚಿಸಿದ್ದಾರೆ. ಸಹಾಯ ಮಾಡುವವರು ಈ ಖಾತೆಗೆ ಜಮೆ ಮಾಡಬಹುದು. ಖಾತೆಯ ಹೆಸರು: ಪ್ರಿಯಾ ಅಡ್ಲಿನ್ ಡಿಸೋಜ, ಬ್ಯಾಂಕ್ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಜೈ, ಕಾಪಿಕಾಡ್ ಶಾಖೆ, ಶಾಖಾ ಕೋಡ್: 40740, ಖಾತೆ ಸಂಖ್ಯೆ: 41792391449, ಐಎಫ್‌ಎಸ್‌ಸಿ ಕೋಡ್: SBIN 0040740.
