ಪುತ್ತೂರು:ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಪ್ರಕರಣದ ಸಂತ್ರಸ್ತೆಗೆ ಮಹಿಳಾ ಆಯೋಗದಲ್ಲಿ ನ್ಯಾಯ ಕೊಡಿಸುವುದಾಗಿ ವ್ಯಕ್ತಿಯೊಬ್ಬರು ಸಂತ್ರಸ್ತೆಯ ತಾಯಿಯಿಂದ ಹಣ ಪಡೆದು ವಂಚಿಸಿರುವ ಮತ್ತು ಮಾಹಿತಿ ತಿಳಿದ ಪ್ರತಿಭಾ ಕುಳಾಯಿ ಅವರು ಆ ವ್ಯಕ್ತಿಯನ್ನು ತರಾಟೆಗೆತ್ತಿಕೊಂಡು ಸಂತ್ರಸ್ತೆಯ ತಾಯಿಗೆ ಹಣ ವಾಪಾಸ್ ಕೊಡಿಸುವ ಕುರಿತು ಸಂಭಾಷಣೆಯ ಆಡಿಯೋವೊಂದು ವೈರಲ್ ಆಗಿದೆ. ಇದನ್ನು ಸ್ವತಃ ಪ್ರತಿಭಾ ಕುಳಾಯಿ ರವರು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಹಿಳಾ ಆಯೋಗದಲ್ಲಿ ನ್ಯಾಯ ಕೊಡಿಸುವುದಾಗಿ ಸಂತ್ರಸ್ತೆಯ ತಾಯಿಯಿಂದ ಲತೀಶ್ ಕುಂದಾರ್ ಎಂಬ ವ್ಯಕ್ತಿಯೊಬ್ಬರು ರೂ. 60ಸಾವಿರ ಪಡೆದಿದ್ದರು.
ಈ ಮಾಹಿತಿ ಅರಿತು ಪ್ರತಿಭಾ ಕುಳಾಯಿ ಅವರು ಲತೀಶ್ ಕುಂದಾರ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ತರಾಟೆಗೆತ್ತಿಕೊಂಡು ತಕ್ಷಣ ಸಂತ್ರಸ್ತೆಯ ಮನೆಗೆ ಹೋಗಿ ಹಣ ಹಿಂದಿರುಗಿಸುವಂತೆ ತಿಳಿಸಿದ್ದಾರೆ. ಇಲ್ಲದಿದ್ದರೆ ಪ್ರೆಸ್ ಮೀಟ್ ಕರೆದು ಎಲ್ಲರಿಗೂ ತಿಳಿಸುತ್ತೇನೆ ಎಂದು ಎಚ್ಚರಿಸಿದ್ದಾರೆ.
ಲತೀಶ್ ಕುಂದಾರ್ ಅನ್ನುವ ವ್ಯಕ್ತಿ ಸಂತ್ರಸ್ತೆಯ ಮನೆಗೆ ಹೋಗಿ ಹಣ ಕೊಟ್ಟಿರುವ ವಿಚಾರವನ್ನು ಮತ್ತೆ ಪ್ರತಿಭಾ ಕುಳಾಯಿ ಅವರಿಗೆ ತಿಳಿಸುವ ವೇಳೆ ಚೆಕ್ ಕೊಟ್ಟಿರುವುದಕ್ಕೆ ಆಕ್ರೋಶಗೊಂಡು 15 ತಾರೀಕಿನ ಒಳಗೆ ಹಣ ಕೊಡಬೇಕೆಂದು ಎಚ್ಚರಿಕೆ ನೀಡಿದ್ದಾರೆ. ಅತ್ತ ಕಡೆಯಿಂದ ನಾನು ಕೊಟ್ಟ ಚೆಕ್ 14 ತಾರೀಕಿಗೆ ಹಾಕಬಹುದು ಎಂದು ಲತೀಶ್ ಕುಂದಾರ್ ತಿಳಿಸಿರುವ ಆಡಿಯೋವೊಂದು ಇದೀಗ ವೈರಲ್ ಆಗಿದೆ.