ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಮೊಸರು ಕುಡಿಕೆ ಉತ್ಸವ ಸಮಿತಿ ,
ಸ್ತಿಶಕ್ತಿ ಮತ್ತು ಸ್ವಸಹಾಯ ಸಂಘ ಹಾಗೂ ಶ್ರೀವರ ಯುವಕ ಮಂಡಲ (ರಿ)
ಪೂರ್ಲಪ್ಪಾಡಿ ಇದರ ಸಹಯೋಗದಲ್ಲಿ ೨೩ನೇ ವರ್ಷದ ಮೊಸರು ಕುಡಿಕೆ
ಉತ್ಸವವು ಪೂರ್ಲಪ್ಪಾಡಿ ಶ್ರೀವರ ವೇದಿಕೆ ಮುಂಭಾಗದಲ್ಲಿ ನಡೆಯಿತು.
ಹಿರಿಯರಾದ ಶ್ರೀ ಮಾಯಿಲಪ್ಪ ಗೌಡ ತೋಟದಮನೆ ಕಾರ್ಯಕ್ರಮ ಉದ್ಘಾಟಿಸಿದರು.
ಅನಂತರ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಸಂಜೆ ಬಹುಮಾನ
ವಿತರಣಾ ಸಮಾರಂಭ ವಿಟ್ಲ ಪಡ್ನೂರು ಗ್ರಾಮ ಪಂಚಾಯತು ಮಾಜಿ
ಅಧ್ಯಕ್ಷರಾದ ಶ್ರೀ ರವೀಶ್ ಶೆಟ್ಟಿ ಕರ್ಕಳ ಇವರ ಅಧ್ಯಕ್ಷತೆಯಲ್ಲಿ
ನಡೆಯಿತು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ವಿಟ್ಲ ಪಡ್ನೂರು ಗ್ರಾಮ ಪಂಚಾಯತು
ಅಧ್ಯಕ್ಷರಾದ ಶ್ರೀ ಜಯಂತ್ ಪೂರ್ಲಪ್ಪಾಡಿ , ಮೂರ್ಖಜೆ ಮೈತ್ರೆಯಿ
ಗುರುಕುಲದ ಶ್ರೀ ರಮೇಶ್ , ಪ್ರೆಮ್ ಲಿಂಕ್ ಟೆಲಿಕಮ್ಯುನಿಕೇಷನ್
ಬೆಂಗಳೂರು ಇದರ ಮಾಲಕರಾದ ಶ್ರೀ ರಾಜೇಶ್ ಪಿ ಆರ್ ಹೊಸಮನೆ ಪೂರ್ಲಪ್ಪಾಡಿ,
ಹವ್ಯಾಸಿ ಯಕ್ಷಗಾನ ಅರ್ಥದಾರಿಗಳಾದ ಶ್ರೀ ಜಗದೀಶ ರೈ ಪನಡ್ಕ , ಮಲರಾಯಿ
ದ್ಯವಸ್ಥಾನ ಆಡಳಿತ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ವಕೀಲರು ನೋಟರಿ ಶ್ರೀ
ರಾಮಣ್ಣ ಗೌಡ ದೇವರಮನೆ, ಶಿಲ್ಪಶ್ರೀ ಯುವಕ ಮಂಡಲದ ಅಧ್ಯಕ್ಷರಾದ
ಶ್ರೀ ರೋಹಿತ್ ರೈ ಚೆಂಬರಡ್ಕ, ಮೊಸರು ಕುಡಿಕೆ ಸಮಿತಿ ಗೌರವಾಧ್ಯಕ್ಷ ಈಶ್ವರ್
ಭಟ್ ಪೂರ್ಲಪ್ಪಾಡಿ, ಸಮಿತಿ ಅಧ್ಯಕ್ಷ ಶ್ರೀ ಸೇಸಪ್ಪ ಗೌಡ ಕೆಳಗಿನಮನೆ,
ಗ್ರಾಮ ಪಂ. ಸದಸ್ಯೆ ಶ್ರೀಮತಿ ಜಯಲಕ್ಷಿ ಕೆ, ಶ್ರೀವರ ಯುವಕ ಮಂಡಲ
ಅಧ್ಯಕ್ಷ ಶ್ರೀ ನಾರಾಯಣ ಗೌಡ ಭಾಗವಹಿಸಿದ್ದರು. ಅಲ್ಲದೇ ಹತ್ತನೇ ಮತ್ತು
೧೨ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿಧ್ಯಾರ್ಥಿಗಳಿಗೆ ಪ್ರತಿಭಾ
ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೂ ಪ್ರೆಂಡ್ಸ್ (ರಿ) ಕಾಪುಮಜಲು ಇದರ
ವತಿಯಿಂದ ವಿಧ್ಯಾರ್ಥಿಗಳಿಗೆ ಕೊಡಲ್ಪಟ್ಟ ಉಚಿತ ಪುಸ್ತಕಗಳನ್ನು
ವಿತರಿಸಲಾಯಿತು.
ಶ್ರೀಮತಿ ಮಾಲವಿ ಯತೀಶ್ ಪ್ರಾರ್ಥಿಸಿದರು. ಜಯಂತ್ ಸ್ವಾಗತಿಸಿದರು. ವಿಶಾಕ್ ಕೆ,
ವರದಿ ಮಂಡಿಸಿದರು. ಸಂತೋಷ್ ಪಿ, ವಿಜಯ ಪಿ, ಯೋಗೀಶ್ ಪಿ , ಆಕಾಶ್ ಕೆ, ಪ್ರಜೇಶ್
ಕೆ, ಚೇತನ್ ಕುಮಾರ್ ಪಿ ಕೆ, ಪ್ರಶಾಂತ್ ಪಿ, ಲೋಕೇಶ್ ಕೆ, ಶಿವರಾಜ್ ಪಿ, ಶ್ರೀಮತಿ
ರಾಧಮ್ಮ ಕೆ, ಶ್ರೀಮತಿ ಇಂದಿರಾ ನೀರ್ಜರಿ, ಶ್ರೀಮತಿ ಪ್ರಮೀಳಾ ಜಿನ್ನಪ್ಪ ಪೂಜಾರಿ ,
ಕುಮಾರಿ ಶೀತಲ್ ಪಿ ಜೆ ದೇವರಮನೆ , ಶ್ರೀಮತಿ ಯೋಗಿತಾ ದೇವಪ್ಪ ಬಹುಮಾನ
ವಿತರಣೆ ಹಾಗೂ ಕಾರ್ಯಕ್ರಮದಲ್ಲಿ ಸಹಕರಿಸಿದರು. ಶ್ರೀ ಹರೀಶ್ ವಿಟ್ಲ ವಂದಿಸಿ,
ಕಾರ್ಯಕ್ರಮ ನಿರ್ವಹಿಸಿದರು. ಶ್ರೀವರ ಯುವಕ ಮಂಡಲದ
ಪದಾಧಿಕಾರಿಗಳು ಹಾಗೂ ಸ್ತಿಶಕ್ತಿ ಮತ್ತು ಸ್ವಸಹಾಯ ಸಂಘದ
ಸದಸ್ಯೆಯರು ಕಾರ್ಯಕ್ರಮದಲ್ಲಿ ಸಹಕರಿಸಿದರು. ಸಭಾ ಕಾರ್ಯಕ್ರಮದ
ಬಳಿಕ ಊರವರಿಂದ ವಿವಿಧ ರೀತಿಯ ಸಾಂಸ್ಕತಿಕ ಕಾರ್ಯಕ್ರಮ ಹಾಗೂ ಕಿರು
ನಾಟಕ ನಡೆಯಿತು.