ನ್ಯೂ ಇಂಡಿಯಾ ರಾಯಲ್ ಸ್ಕೀಮ್ & ಗ್ರೀನ್ ಲೈಟ್ ಲಕ್ಕಿ ಸ್ಕೀಮ್ ಎಂಬ ಲಕ್ಕಿ ಸ್ಕೀಮ್ ನಲ್ಲಿ ಪ್ರತೀ ತಿಂಗಳು 1000/- ದಂತೆ 1 ವರ್ಷದ ಅವಧಿಗೆ ದುಡ್ಡನ್ನು ಸ್ವೀಕರಿಸಿ ಈ ಮಧ್ಯೆ ಪ್ರತೀ ತಿಂಗಳು ಲಕ್ಕಿ ಸ್ಕೀಮ್ ನ ಹೆಸರಿನಲ್ಲಿ ಆಕರ್ಷಕ ಬಹುಮಾನ, ಬಂಪರ್ ಬಹುಮಾನಗಳಾದ ಕಾರು, ಬೈಕು, ಪ್ಯ್ಲಾಟ್, ಸೈಟ್, ಚಿನ್ನದ ಉಂಗುರಗಳು ಮತ್ತು ನಗದುಗಳನ್ನು ಲಕ್ಕಿ ಡ್ರಾ ನಲ್ಲಿ ಸಿಕ್ಕಿದವರಿಗೆ ಇವುಗಳನ್ನು ಕೊಡುವುದಾಗಿ ತಿಳಿಸಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸುಮಾರು 10 ಕೋಟಿಗೂ ಮೀರಿದ 13 ಸಾವಿರ ಜನರಿಗೆ ಲಕ್ಕಿ ಸ್ಕೀಮ್ ಕಂತು ಮುಗಿದ ನಂತರ ಡೆಪಾಸಿಟ್ ಮಾಡಿದ ಹಣ ಹಾಗೂ ಸರಿಯಾದ ಬಹುಮಾನಗಳನ್ನು ನೀಡದೇ ಮತ್ತು ಎಲ್ಲರಿಗೂ ಹಣವನ್ನು ನೀಡುತ್ತೇವೆ ಎಂದು ಆಶ್ವಾಸನೆ ನೀಡುತ್ತಾ ಕಾಟಿಪಳ್ಳ 2ನೇ ಬ್ಲಾಕ್ ಸಂಶುದ್ದೀನ್ ಸರ್ಕಲ್ ಬಳಿ ಇರುವ ಬಿ.ಎಂ.ಆರ್ ಕಟ್ಟಡದಲ್ಲಿರುವ ನ್ಯೂ ಇಂಡಿಯಾ ಕಛೇರಿಯನ್ನು ಏಕಾಏಕಿಯಾಗಿ ಬಂದ್ ಮಾಡಿ ಸಾರ್ವಜನಿಕರಿಗೆ ಆಸೆ ಹುಟ್ಟಿಸಿ ವಂಚಿಸಿದ್ದು ಆರೋಪಿಗಳಾದ 1.ಮೊಹಮ್ಮದ್ ಅಶ್ರಫ್ ಬಜಪೆ, ಪ್ರಾಯ 43 ವರ್ಷ, ತಂದೆ: ಉಮ್ಮರಬ್ಬ ಕಳವಾರು, ವಾಸ: ಡೋರ್ ನಂಬ್ರ 4-28-29. ಅಶ್ರಫ್ ಮಂಜಿಲ್, ಕೆ.ಪಿ ನಗರ, ಬಜಪೆ, ಮಂಗಳೂರು ತಾಲೂಕು, ದ.ಕ. ಜಿಲ್ಲೆ. ಹಾಲಿವಾಸ: ಪ್ಲಾಟ್ ನಂ. 302, 3 ನೇ ಮಹಡಿ, ಎ ಬ್ಲಾಕ್ ಮೌರಿಷ್ಕ ಪ್ಯಾಲೇಸ್, ಕದ್ರಿ ಕಂಬಳ ರೋಡ್, ಮಂಗಳೂರು ತಾಲೂಕು, ದ.ಕ. ಜಿಲ್ಲೆ. 2. ಮೊಹಮ್ಮದ್ ಹನೀಫ್, ಪ್ರಾಯ: 50 ವರ್ಷ ತಂದೆ: ದಿ/ ಎಂ. ಎ. ಇಬ್ರಾಹಿಂ, ವಾಸ: ಇಕ್ಬಾಲ್ ರವರ ಬಾಡಿಗೆ ಮನೆ ಡೋರ್ ನಂಬ್ರ 7-22/6, ಸೈಟ್ ನಂಬ್ರ 61, ಫಾಝೀಲ್ ಕಾಟೇಜ್, 1 ನೇ ಮಹಡಿ, 7 ನೇ ಬ್ಲಾಕ್, ಕೃಷ್ಣಾಪುರ, ಕಾಟಿಪಳ್ಳ ಗ್ರಾಮ ಮಂಗಳೂರು ತಾ, ದ. ಕ ಜಿಲ್ಲೆ ರವರ ವಿರುದ್ಧ ಶ್ರೀ ಭುಜಂಗ ಎ ಪೂಜಾರಿ, ಪ್ರಾಯ 51 ವರ್ಷ, ತಂದೆ: ದಿ||ಅಂತಪ್ಪ ಪೂಜಾರಿ, ವಾಸ: ಮನೆ ನಂ 2-75, ಚೇಳ್ಯಾರು ಗ್ರಾಮ ಮತ್ತು ಅಂಚೆ, ಹಳೆಯಂಗಡಿ ಮಂಗಳೂರು, ದ.ಕ ಜಿಲ್ಲೆ ರವರು ದೂರು ನೀಡಿದ್ದು ಇದೊಂದು ಅನಿಯಂತ್ರಿತ ಠೇವಣಿ ಯೋಜನೆ ಆಗಿದ್ದು ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಇಲ್ಲದೇ ಸಾರ್ವಜನಿಕರಿಂದ ನ್ಯೂ ಇಂಡಿಯಾ ರಾಯಲ್ ಲೈಫ್ ಸ್ಕೀಮ್ ಹೆಸರಿನಲ್ಲಿ ಸುಮಾರು 10 ಕೋಟಿಗಿಂತ ಅಧಿಕ ಹಣ ಸಂಗ್ರಹಣೆ ಮಾಡಿ ವಂಚನೆಗೈದು, ನಂಬಿಕೆ ದ್ರೋಹ ಮಾಡಿದ ಬಗ್ಗೆ ದಿನಾಂಕ: 11.08.2025 ರಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅ.ಕ್ರ 104/2025 ಕಲಂ 316(2), 318(4) ಬಿ.ಎನ್.ಎಸ್ ಮತ್ತು ಕಲಂ 21 ಅನಿಯಂತ್ರಿತ ಠೇವಣಿ ನಿಷೇಧ ಕಾಯ್ದೆ (BUDS Act) ಯಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮೊಹಮ್ಮದ್ ಅಶ್ರಫ್ ಬಜಪೆ ಹಾಗೂ ಮೊಹಮ್ಮದ್ ಹನೀಫ್ ರವರನ್ನು ದಿನಾಂಕ: 12.08.2025 ರಂದು ದಸ್ತಗಿರಿ ಮಾಡಲಾಗಿದ್ದು ನಂತರ ದಿನಾಂಕ: 13.08.2025 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ 7 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದು ನಂತರ ದಿನಾಂಕ: 19.08.2025 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಂತೆ ಸದರಿ ಆರೋಪಿತರಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ. ಸದ್ರಿ ಆರೋಪಿತರು ಈ ಹಿಂದೆ ಮಾಡಿದ ನ್ಯೂ ಇಂಡಿಯಾ ಪ್ರೀಮಿಯಂ ಸ್ಕೀಮ್ ಮತ್ತು ನ್ಯೂ ಇಂಡಿಯಾ ಬಂಪರ್ ಸ್ಕೀಮ್ ಗಳನ್ನು ಸಹ ತನಿಖೆಯನ್ನು ಮಾಡಲಾಗುವುದು.
ಆರೋಪಿತರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳು, ಚಿನ್ನಾಭರಣಗಳ ಖರೀದಿ, ನಿವೇಶನ, ವಾಹನ ಖರೀದಿ, ಬೋಳೂರು ಗ್ರಾಮದ ಮನೆ, ಬಜಪೆಯಲ್ಲಿರುವ ಮನೆ, ಬಜಪೆ ತಾರಿಕಂಬ್ಳದಲ್ಲಿರುವ 5 ಪ್ಲ್ಯಾಟ್ ಗಳು, ಕಛೇರಿಯಲ್ಲಿದ್ದ ಕಂಪ್ಯೂಟರ್ ಉಪಕರಣಗಳನ್ನು ಹಾಗೂ ಇನ್ನಿತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಈ ಕಾಯ್ದೆಯಂತೆ ಆರೋಪಿತರು ಲಕ್ಕಿ ಸ್ಕೀಮ್ ನ ಹಣದಲ್ಲಿ ಖರೀದಿಸಿದ ಮನೆ, ನಿವೇಶನ, ಪ್ಲ್ಯಾಟ್, ವಾಹನಗಳು, ಚಿನ್ನಾಭರಣಗಳು ಹಾಗೂ ಇನ್ನಿತರ ವಸ್ತುಗಳ ಜಪ್ತಿ ಮಾಡಲು ಮಾನ್ಯ ಜಿಲ್ಲಾಧಿಕಾರಿಯವರಿಗೆ, ಉಪ ವಿಭಾಗ ದಂಡಾಧಿಕಾರಿಯವರಿಗೆ, ಕಂದಾಯ ಇಲಾಖೆಯವರಿಗೆ ಪತ್ರ ವ್ಯವಹಾರವನ್ನು ಮಾಡಲಾಗಿರುತ್ತದೆ.
ಸದ್ರಿ ಲಕ್ಕಿ ಸ್ಕೀಮ್ ಗಳಿಗೆ ಸೇರಿದ ಸದಸ್ಯರು ಹಾಗೂ ಸದಸ್ಯರಿಂದ ಹಣ ಸಂಗ್ರಹಣೆ ಮಾಡಿದ ಏಜೆಂಟ್ ರವರುಗಳು ಸಂಬಂಧಿಸಿದ ದಾಖಲಾತಿಯೊಂದಿಗೆ ಠಾಣೆಗೆ ಬಂದು ಹೇಳಿಕೆಯನ್ನು ನೀಡುವುದು.
ಪ್ರಕರಣದ ಆರೋಪಿತರ ಪತ್ತೆಯ ಬಗ್ಗೆ ಮಾನ್ಯ ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಪ್ರಮೋದ್ ಕುಮಾರ್ ಪಿ ರವರ ನೇತೃತ್ವದಲ್ಲಿ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ರಘುನಾಯಕ, ರಾಘವೇಂದ್ರ ನಾಯ್ಕ್, ಜನಾರ್ಧನ ನಾಯ್ಕ್, ಶಶಿಧರ ಶೆಟ್ಟಿ, ಎಎಸ್.ಐ ರವರಾದ ತಾರನಾಥ, ರಾಜೇಶ್ ಆಳ್ವಾ ಹಾಗೂ ಸಿಬ್ಬಂದಿಯವರಾದ ರಾಜೇಂದ್ರ ಪ್ರಸಾದ್, ಧನಂಜಯಮೂರ್ತಿ, ಅಜಿತ್ ಮ್ಯಾಥ್ಯೂ, ತಿರುಪತಿ, ಕಾರ್ತಿಕ್, ವಿನೋದ್ ಕುಮಾರ್, ಸಂಜೀವ ಕುಮಾರ್, ಓಂಪ್ರಕಾಶ್ ಬಿಂಗಿ, ಮಂಜುನಾಥ ಆಯಟ್ಟಿ ರವರು ಆರೋಪಿ ಪತ್ತೆಯ ಬಗ್ಗೆ ಭಾಗವಹಿಸಿರುತ್ತಾರೆ.