ಹಿಂದುಳಿದ ಕೊರಗ ಸಮುದಾಯದ ವೃದ್ಧ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ನಿವಾಸಿ ಮಾಂಕು ಕೊರಗ ಅವರಿಗೆ ಮಂಜೂರಾದ ಜಾಗದ ದಾಖಲೆ ಪತ್ರಗಳ ಯಥಾಪ್ರತಿಗೆ ಕಳೆದ 15 ವರ್ಷಗಳಿಂದ ತಾಲೂಕು ಕಚೇರಿಗೆ ನಿರಂತರವಾಗಿ ಅಲೆಯುತ್ತಿದ್ದು ಕಳೆದೆರೆಡು ದಿನಗಳ ಹಿಂದೆ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಪ್ರಯತ್ನದಿಂದ ಇದೀಗ ದಾಖಲೆಪತ್ರಗಳು ದೊರಕಿದೆ.
15 ವರ್ಷಗಳ ಹಿಂದೆ ತನ್ನ ಜಮೀನಿನ ಗಡಿಗುರುತು ಮಾಡುವ ಸಲುವಾಗಿ ಮಾಂಕು ಕೊರಗ ಅವರು ತನ್ನ ದಾಖಲೆಗಳ ಸಹಿತ ಬಂಟ್ವಾಳ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದರು. ಆದರೆ ಅಲ್ಲಿಯ ಸಿಬ್ಬಂದಿಗಳಿಂದ ಆ ದಾಖಲೆಪತ್ರಗಳ ಕಡತಗಳು ಕಾಣೆಯಾಗಿದ್ದು. ಈ ಬಗ್ಗೆ ಅದರ ಯಥಾಪ್ರತಿಯನ್ನು ನೀಡುವಂತೆ ಅರ್ಜಿ ಸಲ್ಲಿಸಿದರೂ ಕೂಡ ನಿರಂತರವಾಗಿ ಅಲೆದಾಟ ನಡೆಸಿ ಬಡ ಮಾಂಕು ಕೊರಗರನ್ನು ಇಲಾಖೆ ಹೈರಾಣಿಗಿಸಿತ್ತು. ಈ ಬಗ್ಗೆ ಸ್ಥಳೀಯ ಬಿಜೆಪಿ ಮುಖಂಡರಾದ ದೇವಿಪ್ರಸಾದ್ ಶೆಟ್ಟಿ ಬೆಂಜತ್ತಿಮಾರ್ ಹಾಗೂ ಧನಂಜಯ ಪಾದೆ ಅವರು ಮಾಂಕು ಕೊರಗರ ಪರವಾಗಿ ನಿರಂತರವಾಗಿ ಹೋರಾಟ ನಡೆಸಿದರು, ಅಧಿಕಾರಿವರ್ಗದವರ ಅಸಹಕಾರದ ನಡುವೆ ಕೊನೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಮೂಲಕ ಅಧಿಕಾರಿ ವರ್ಗಕ್ಕೆ ಒತ್ತಡ ಹಾಕಿಸಿ ಬಂಟ್ವಾಳ ತಹಶಿಲ್ದಾರ್ ಅರ್ಚನಾ ಭಟ್ ಅವರು ದಾಖಲೆಗಳ ಯಥಾಪ್ರತಿಯನ್ನು ಮಾಂಕು ಕೊರಗವರಿಗೆ ಹಸ್ತಾಂತರಿಸಿದರು.
ಈ ಬಗ್ಗೆ ವೀರಕಂಭದ ಗ್ರಾಮಸ್ಥರು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಈ ಬಗ್ಗೆ ನಿರಂತರ ಹೋರಾಟ ನಡೆಸಿದ ದೇವಿಪ್ರಸಾದ್ ಶೆಟ್ಟಿ ಬೆಂಜತ್ತಿಮಾರ್ ಹಾಗೂ ಧನಂಜಯ ಪಾದೆ ಅವರಿಗೆ ಅಭಿನಂದನೆ ಸಲ್ಲಿಸಿದಾರೆ.