ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ನಡೆಸಿದ 2024–25 ನೇ ಸಾಲಿನ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ವಿಟ್ಲದ ತಾಯಿ–ಮಗಳು ಜೋಡಿ ಕು. ಸಾಧಿಕಾ ಎಂ. ಮತ್ತು ಅವರ ತಾಯಿ ಶ್ರೀಮತಿ ಜಯಲಕ್ಷ್ಮಿ ಇಬ್ಬರೂ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ.
ಕು. ಸಾಧಿಕಾ ಎಂ. ಇವರು ಶೇಕಡಾ 82.75% ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಅವರು ಕೊಡಂಗೆಯ ಕೃಷಿಕರಾದ ಶ್ರೀ ಪ್ರವೀಣ್ ಎಂ.ಜಿ ಮತ್ತು ಶ್ರೀಮತಿ ಜಯಲಕ್ಷ್ಮಿ ದಂಪತಿಗಳ ಪುತ್ರಿಯಾಗಿದ್ದು, ವಿಟ್ಲದ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿ.
ಶ್ರೀಮತಿ ಜಯಲಕ್ಷ್ಮಿ ಇವರು 92.25% ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ತಾಯಿ–ಮಗಳು ಇಬ್ಬರೂ ಸ್ವರಸಿಂಚನ ಸಂಗೀತ ಶಾಲೆ, ವಿಟ್ಲ ಶಾಖೆಯ ವಿದ್ಯಾರ್ಥಿನಿಯರಾಗಿದ್ದು, ವಿದುಷಿ ಶ್ರೀಮತಿ ಸವಿತಾ ಕೋಡಂದೂರು ಅವರ ಶಿಷ್ಯರು.