ಉದಯ್ ಪೂಜಾರಿ ಸಾರಥ್ಯದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫ್ರೆಂಡ್ಸ್ ಬಲಾಲ್ಲಭಾಗ್ ಬಿರುವೆರ್ ಕುಡ್ಲ ರಿ. ಪುತ್ತೂರು ಘಟಕ ದ ವತಿಯಿಂದ 07.09.2025 ರವಿವಾರ ದಂದು
ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಪ್ರಜ್ಞ ಸೇವಾಶ್ರಮ ಬಿರುಮಲೆಬೆಟ್ಟ ಪುತ್ತೂರು ಇಲ್ಲಿ ಜರಗಿತು. ದಿವ್ಯಾಂಗ ಮಕ್ಕಳು ದೀಪ ಬೆಳಗಿಸಿ ಪ್ರಾರ್ಥನೆ ಮಾಡಿದರು.
ಘಟಕ ವತಿಯಿಂದ ಹರೀಶ ಶಾಂತಿ ಪುತ್ತೂರು. ಭವಿತ್ ಕುಮಾರ್ ಕುರಿಯ. ಪ್ರಸಾದ್ ಪುರುಷರಕಟ್ಟೆ ಹಾಗೂ ಬೇಬಿ ಹವೀಶ ಪುತ್ತೂರು ಭಾಗವಹಿಸಿದ್ದರು. ಆಶ್ರಮ ದ ಮುಖ್ಯಸ್ಥ ಅಣ್ಣಪ್ಪ ದಂಪತಿಗಳು ಸ್ವಾಗತಿಸಿದರು. ಘಟಕ ವತಿಯಿಂದ ಆಶ್ರಮದಲ್ಲಿ ಅಡುಗೆ ಮಾಡಲು ಅವಶ್ಯಕತೆ ಇರುವ ಪಾತ್ರಗಳನ್ನು ನೀಡಲಾಯಿತು. ಬೆಳಗ್ಗಿನ ಉಪಹಾರ ಹಾಗೂ ಸಂಜೆ ಸಿಹಿತಿಂಡಿ ನೀಡಿ ದಿವ್ಯಾಂಗ ಮಕ್ಕಳ ಸಂತೋಷ ಕ್ಷಣಗಳು ಗುರು ಜಯಂತಿ ಆಚರಣೆ ಸಾರ್ಥಕ ಭಾವನೆ ಮೂಡಿಸಿತು.