ಪರಸ್ಪರ ಸಹಕಾರ-ಸಹಬಾಳ್ವೆ ಯಾವುದೇ ಕಾರ್ಯದ ಮೂಲಗುರಿಯಾಗಬೇಕು ಎಂಬ ಮಾತಿದೆ. ಸಂಸ್ಥೆಯೊಂದು ಕೇವಲ ಲಾಭದ ಉದ್ದೇಶ ಮಾತ್ರವಲ್ಲದೇ, ತನ್ನಿಂದ ಯಾರಿಗಾದರೂ ಒಳಿತಾಗಬೇಕು ಎನ್ನುವ ದೂರದೃಷ್ಟಿತ್ವವನ್ನು ಹೊಂದಿದರೆ ಶ್ರೇಷ್ಠ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಇದೇ ದಾರಿಯಲ್ಲಿ ಮುನ್ನಡೆದು ಮಾದರಿಯಾಗಿದೆ ಈ ಸಂಸ್ಥೆ.

52 ವರ್ಷಗಳಿಂದ ಸಾಲಸೌಲಭ್ಯವನ್ನು ನೀಡಿಕೊಂಡು ಬಂದಿರುವ ಸಂಸ್ಥೆ ಸಾರಿಗೆ, ಉದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾರ್ಮಿಕರ ಮಕ್ಕಳಿಗೆ ಸೈಕ್ಷಣಿಕ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಳೆದ 13 ವರ್ಷಗಳಿಂದ ವಿದ್ಯಾರ್ಥಿ ನಿಧಿಯನ್ನು ನೀಡುತ್ತಾ ಬಂದಿದೆ. ಲೆಕ್ಕವಿಲ್ಲದಷ್ಟು ಗ್ರಾಹಕರಿಗೆ ಎಲ್ಲಾ ರೀತಿಯಲ್ಲಿಯೂ ಸಾಲ ಸೌಲಭ್ಯ ನೀಡಿರುವ ಸಂಸ್ಥೆಯೊಂದು ವಿದ್ಯಾರ್ಥಿಗಳ ವಿಚಾರದಲ್ಲಿ ಮಾದರಿ ಯೋಚನೆ-ಯೋಜನೆ ಮಾಡಿರುವುದು ಶ್ಲಾಘನೀಯ. ಪ್ರೌಢಶಾಲೆ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿ ವಿತರಿಸಿ ಅವರ ಭವಿಷ್ಯದ ಹಾದಿಗೆ ಸ್ಪೂರ್ತಿಯಾಗಿದೆ.

ಈಗಾಗಲೇ ಪುತ್ತೂರು, ಸುಳ್ಯ, ನೆಲ್ಯಾಡಿ ಶಾಖೆಯ ಒಟ್ಟು 868 ವಿದ್ಯಾರ್ಥಿಗಳಿಗೆ 37ಲಕ್ಷ ಮೌಲ್ಯದ ವಿದ್ಯಾರ್ಥಿ ನಿಧಿ ಒದಗಿಸಿದ್ದು, ಮುಂದಿನ ದಿನಗಳಲ್ಲಿ ದಕ್ಷಿಣಕನ್ನಡದಲ್ಲಿ 1 ಕೋಟಿ, 36 ಲಕ್ಷದ 41ಸಾವಿರ ಮೌಲ್ಯದ ವಿದ್ಯಾರ್ಥಿ ನಿಧಿ ಒದಗಿಸುವ ಗುರಿ ಹಾಗೂ ಉದ್ದೇಶವನ್ನು ಇಟ್ಟುಕೊಂಡಿದೆ.
ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಇದರ ಆಶ್ರಯದಲ್ಲಿ ವಿದ್ಯಾರ್ಥಿ ನಿಧಿ ವಿತರಣಾ ಸಮಾರಂಭ ಸೆ.09 ರಂದು ಪುತ್ತೂರಿನ ಕೊಂಬೆಟ್ಟಿನ ಬಂಟರ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಶ್ರೀರಾಮ್ ಫೈನಾನ್ಸ್ ಲಿ. ನ ಜೋನಲ್ ಬಿಸಿನೆಸ್ ಹೆಡ್ ಶರತ್ಚಂದ್ರ ಭಟ್ ಕಾಕುಂಜೆ ಉದ್ಘಾಟಿಸಿದರು. ವಿದ್ಯಾರ್ಥಿ ನಿಧಿಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿತರಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ನಗರ ಠಾಣಾ ಪೊಲೀಸ್ ನಿರೀಕ್ಷಕರಾದ ಆಂಜನೇಯ ರೆಡ್ಡಿ , ಮಹಾಲಿಂಗೇಶ್ವರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಕುಂಬ್ರ ದುರ್ಗಾಪ್ರಸಾದ್ ರೈ, ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ವಿಜಯ ಸರಸ್ವತಿ, ಸುಳ್ಯ ವಕೀಲರ ಸಂಘದ ಅಧ್ಯಕ್ಷ ಸುಕುಮಾರ್ ಕೊಡ್ತುಗುಳಿ, ಧರಿತ್ರಿ ಅಸೋಸಿಯೇಟ್ಸ್ ನ ಮಾಲಕರಾದ ಮುರುಳಿಕೃಷ್ಣ ಹಸಂತಡ್ಕ,ಅಜರ್ ಲಾಜಿಸ್ಟಿಕ್ಸ್ ನ ಮಾಲಕ ಖಲಂದರ್,ಗೂಡ್ಸ್ ವಾಹನ ಚಾಲಕ ಮಾಲಕರ ಸಂಘ ಪುತ್ತೂರು ಇದರ ಅಧ್ಯಕ್ಷ ರಘುರಾಮ ಪಾಟಳಿ , ಶ್ರೀರಾಮ್ ಫೈನಾನ್ಸ್ ನ ಲೀಗಲ್ ಹೆಡ್ ಉಲ್ಲಾಸ್ ವಿ ನಾಯಕ್, ಜೋನಲ್ ಪ್ರಾಡಕ್ಟ್ ಹೆಡ್ ನಾಗರಾಜ್ ಬಿ, ಸ್ಟೇಟ್ ಹೆಡ್ ಸದಾಶಿವ, ಜೋನಲ್ ಪ್ರಾಡಕ್ಟ್ ಹೆಡ್ ಚಂದ್ರಹಾಸ ಆಳ್ವ, ರೀಜಿನಲ್ ಬಿಸಿನೆಸ್ ಹೆಡ್ ಚೇತನ್ ಅರಸ್,ಮಹೇಶ್ ಕುಮಾರ್ ಸಿ ಯಚ್, ಜಯಪ್ರಕಾಶ್ ರೈ ಬಿ ಉಪಸ್ಥಿತರಿದ್ದರು.
