ಸಿವಿಲ್ ಇಂಜಿನಿಯರ್ ಆಗಿದ್ದ ಕಡಬ ತಾಲೂಕು ಐತ್ತೂರು ಗ್ರಾಮದ ಕೇರ್ಪಡ ನಿವಾಸಿ ಸುಜಯ್ (28) ಎಂಬವರು ಉದ್ಯೋಗ ಇಲ್ಲ ಎಂದು ಕೊರಗಿ ಜಿಗುಪ್ಸೆಗೊಂಡು ಆತ್ಮ ಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.
ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನಲ್ಲಿ ಮತ್ತು ಹಾಸನದಲ್ಲಿ ಸುಮಾರು ಆರು ತಿಂಗಳ ಕಾಲ ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿ, ಬಳಿಕ ಜೀವನ ನಡೆಸಲು ಸಂಬಳ ಸಾಕಾಗುವುದಿಲ್ಲವೆಂದು ಕೆಲಸ ಬಿಟ್ಟು ಊರಿನಲ್ಲಿ ಕೃಷಿ ಮತ್ತು ಗ್ರಾಮ ಪಂಚಾಯಿತಿಯ ಸಣ್ಣಪುಟ್ಟ ಕಾಮಗಾರಿಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದರು.
ಸರಿಯಾದ ಕೆಲಸ ಸಿಕ್ಕಿಲ್ಲ ಎಂದು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಶನಿವಾರ ಮೃತರ ತಂದೆ ಸುಂದರ ಗೌಡ ತನ್ನ ಅಕ್ಕನ ಮನೆ ಕೊಡಿಂಬಾಳ ಗ್ರಾಮದ ಮಡ್ಯಡ್ಕಕ್ಕೆ ಶ್ರಾವಣ ಶನಿವಾರದ ಊಟಕ್ಕೆ ತೆರಳಿದ್ದ ವೇಳೆ ಮನೆಯಲ್ಲಿದ್ದ ಸುಜಯ್ ರಾತ್ರಿ ಹೊತ್ತು ಮನೆಯ ಹಿಂದುಗಡೆ ಇರುವ ಹಳೆಯ ಮನೆಯ ಛಾವಣಿಗೆ ಅಡ್ಡಲಾಗಿ ಹಾಕಲಾಗಿದ್ದ ಬಿದಿರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.
ಸುಂದರ ಗೌಡ ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.