ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್
ಕಳೆದ ಆರ್ಥಿಕ ವರ್ಷದಲ್ಲಿ 864.26 ಕೋಟಿ ರೂ. ವ್ಯವಹಾರ ನಡೆಸಿ
3, 45,30,790.73 ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಎಚ್. ಜಗನ್ನಾಥ ಸಾಲಿಯಾನ್ ತಿಳಿಸಿದರು.
ವಿಟ್ಲ ಶಾಂತಿನಗರದ ಅಕ್ಷಯ ಸಮುದಾಯ ಭವನದಲ್ಲಿ ಗುರುವಾರ ನಡೆದ ಸಂಘದ 70ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ಸದಸ್ಯರಿಗೆ 22% ಲಾಭಾಂಶ ಹಂಚಲಾಗುವುದು ಎಂದು ಘೋಷಣೆ ಮಾಡಿದರು. ಸಂಘವು ಉತ್ತಮ ನಿರ್ವಹಣೆಗಾಗಿ ಸತತ ನಾಲ್ಕನೇ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಸಾಧನಾ ಪ್ರಶಸ್ತಿ ಪಡೆದಿದೆ. ಬ್ಯಾಂಕಿನ ಉಪ್ಪಿನಂಗಡಿ ಶಾಖೆ ಶೀಘ್ರವಾಗಿ ಆರಂಭವಾಗಲಿದೆ ಎಂದು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮನೋರಂಜನ್ ಕೆ. ಆರ್. ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್ ಕೆ.,ನಿರ್ದೇಶಕರಾದ
ಜಯಂತಿ ಎಚ್. ರಾವ್, ಶುಭಲಕ್ಷ್ಮೀ, ದಯಾನಂದ ಆಳ್ವ ಕೆ.,ಪೂವಪ್ಪ ಎಸ್.,ದಿವಾಕರ್ ವಿ.,ಕೇಶವ ಎ.,ಗೋವರ್ಧನ ಕುಮಾರ್ ಐ., ಭಾಸ್ಕರ ಶೆಟ್ಟಿ, ರಾಮದಾಸ ಶೆಣೈ ವಿ. , ಮೋಹನ್ ಕೆ. ಎಸ್. ,ವಿಶ್ವನಾಥ ಎಂ., ತಿರುಮಲೇಶ್ವರ ಭಟ್ ಪಿ.,ಸತೀಶ್ ಪಿ. ಉಪಸ್ಥಿತರಿದ್ದರು.

ಸಭೆಯಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿ
ಚಂದ್ರಹಾಸ ರಾಣ್ಯ ಡಿ.,ಲೆಕ್ಕಾಧಿಕಾರಿ ಕುಶಾಲಪ್ಪ ಟಿ.,ವಿಟ್ಲ ಕೇಂದ್ರ ಕಚೇರಿ, ಕನ್ಯಾನ, ಬಿ.ಸಿ. ರೋಡ್, ಕಲ್ಲಡ್ಕ ಪುತ್ತೂರು ಶಾಖೆಗಳ ಶಾಖಾಧಿಕಾರಿಗಳು , ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬ್ಯಾಂಕಿನ ಸಂಸ್ಥಾಪಕ ಉರಿಮಜಲು ವೆಂಕಪ್ಪಯ್ಯನವರ ಭಾವಚಿತ್ರಕ್ಕೆ ಹಾರ ಹಾಕಿ ಸಂಸ್ಮರಣೆ ಮಾಡಲಾಯಿತು.
ಸಂಘದ ಹಿರಿಯ ಸದಸ್ಯರಾದ ಹಿರಿಯ ಸದಸ್ಯ ನಾರಾಯಣ ಭಟ್ ಎಂ.ಮತ್ತು ಸುಂದರಿ, ಮಜಿ ರಾಮ ಭಟ್ ಮತ್ತು ವೆಂಕಟರಮಣ ಭಟ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಳೆದ ಸಾಲಿನಲ್ಲಿ ಮೃತರಾದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಘದ ಅಧ್ಯಕ ಎಚ್. ಜಗನ್ನಾಥ ಸಾಲಿಯಾನ್ ಸ್ವಾಗತಿಸಿದರು.
ಕಲ್ಲಡ್ಕ ಶಾಖಾಧಿಕಾರಿ ಶ್ರೀನಿಧಿ ಕುಡ್ವ ಪ್ರಾರ್ಥನೆ ಹಾಡಿದರು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್ ಕೆ. ಸಂಘದ
ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಮನೋರಂಜನ್ ಕೆ. ಆರ್. ವಂದಿಸಿದರು. ಕೇಂದ್ರ ಕಚೇರಿ
ಸಿಬ್ಬಂದಿ ಮಹೇಶ್ ಕುಮಾರ್ ಎಸ್. ಕಾರ್ಯಕ್ರಮ ನಿರೂಪಿಸಿದರು.