ಪುತ್ತೂರು:ವೃತ್ತಿಯಲ್ಲಿ ವಕೀಲರಾಗಿದ್ದು ಹವ್ಯಾಸಿ ಛಾಯಾಗ್ರಾಹಕರಾಗಿಯೂ ಚಿರಪರಿಚಿತರಾಗಿದ್ದ, ಕಬಕ ಗ್ರಾಮದ ಮುಂಗ್ಲಿಮನೆ ನಿವಾಸಿ ತೀರ್ಥಪ್ರಸಾದ್ (54ವ.) ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಸೆ.11ರಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು.
ಅವಿವಾಹಿತರಾಗಿದ್ದ ಇವರು ಸಹೋದರ, ಸಹೋದರಿ, ಬಾವ,ಅತ್ತಿಗೆಯಂದಿರು, ನಾದಿನಿಯರನ್ನು ಅಗಲಿದ್ದಾರೆ.
ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.ಮೃತರ ಅಂತ್ಯಕ್ರಿಯೆ ಸೆ.11ರಂದು ಮುಂಗ್ಲಿಮನೆಯಲ್ಲಿ ನಡೆಯಿತು.