ಪುತ್ತೂರು: ಹೊಟ್ಟೆ ನೋವು ಗುಣವಾಗಿಲ್ಲ ಎಂದು ಚಿಂತೆಯಿಂದ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನ ಕುರಿಯ ಗ್ರಾಮದ ಕೈಂತಿಲ ಎಂಬಲ್ಲಿ ನಡೆದಿದೆ.
ಮೃತರನ್ನು ಕುರಿಯ ಗ್ರಾಮದ ಕೈಂತಿಲ ನಿವಾಸಿ ಪುರೋಹಿತ ಸುರೇಶ್ ನಕ್ಷತ್ರಿತ್ತಾಯ (49) ಎಂದು ಗುರುತಿಸಲಾಗಿದೆ.
ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.