ತುಳಸಿ ಕ್ಯಾಟರರ್ಸ್ ಪುತ್ತೂರು, ಎಸ್.ಜಿ.ಪ್ಯೂರ್ ಮಸಾಲೆ, ಕುಂಕುಮ್ ಅಸೋಸಿಯೇಟ್ಸ್, ವಿಜಯ ಸರ್ವಿಸಸ್ ಇದರ ಆಶ್ರಯದಲ್ಲಿ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯನೆಪೋಯ ವಿಶ್ವವಿದ್ಯಾಲಯ ದೇರಳಕಟ್ಟೆ ಮತ್ತು ಸಮುದಾಯ ದಂತ ಆರೋಗ್ಯ ವಿಭಾಗ ಯನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ವತಿಯಿಂದ ಉಚಿತ ದಂತ ಚಿಕಿತ್ಸಾ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರವು ಸೆ.14ರಂದು ಪುತ್ತೂರು ಜೈನ ಭವನದಲ್ಲಿ ನಡೆಯಿತು.

ಸಮಾಜಕ್ಕೆ ಅರ್ಪಣೆ ಮಾಡುವುದನ್ನು ತೋರಿಸುವ ಮಾದರಿ ಕಾರ್ಯಕ್ರಮ:
ಶಿಬಿರವನ್ನು ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ 1 ಲಕ್ಷ ಜನರಿಗೆ ಕೂಡಾ ಅಡುಗೆ ಮಾಡಿ ಹಾಕುವ ಶಕ್ತಿ ಇದ್ದರೆ ಅದು ಹರೀಶ್ ಭಟ್ ಅವರಿಗೆ. ಅಂತಹ ಸಾಮಾರ್ಥ್ಯವುಳ್ಳ ಅವರು ತನ್ನ ವ್ಯವಹಾರದಲ್ಲಿ ಒಂದಾoಶವನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ. ಉದ್ಯಮಿ ಸಮಾಜಕ್ಕೆ ತಮ್ಮ ಸೇವೆ ಯಾವ ರೀತಿ ಕೊಡಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಹಾಗಾಗಿ ಈ ಕಾರ್ಯಕ್ರಮ ಮಾದರಿ ಆಗಿದೆ ಎಂದರು.

ಬದಲಾಗುವ ಸಂದೇಶ ಕೊಟ್ಟವರು ಹರೀಶ್ ಭಟ್:
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ‘ಸೇವೆಯೆಂಬ ಯಜ್ಞದಲ್ಲಿ ಸಮಿತೆಯಂತೆ ಉರಿಯುವ’ ಎಂಬoತೆ ಬದುಕಿನ ಸಾರ್ಥ್ಯಕ್ಯ ಕಂಡು ಕೊಳ್ಳುವ ನಿಟ್ಟಿನಲ್ಲಿ ಹರೀಶಣ್ಣ ಉತ್ತಮ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಶ್ರೀನಿವಾಸ ಕಲ್ಯಾನೋತ್ಸವದ ಸಂದರ್ಭ ಪೂರ್ಣ ಸಹಕಾರ ನೀಡಿದ್ದಾರೆ ಇವತ್ತು ದೇಶ ಬದಲಾಗಿದೆ, ಸಮಾಜ ಬದಲಾಗಿದೆ ಎಂದು ಇಂತಹ ಕಾರ್ಯಕ್ರಮ ಮೂಲಕ ಸಂದೇಶ ಕೊಟ್ಟವರು ಹರೀಶ್ ಭಟ್ ಅವರು ಎಂದರು .
ದೇವರು ಮೆಚ್ಚುವ ಸೇವೆ:
ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆಯವರು ಮಾತನಾಡಿ ಆರೋಗ್ಯ ನೀಡುವ ಕೆಲಸ ಸಮಾಜಕ್ಕೆ ಒಳ್ಳೆಯ ಅಧ್ಯಾಯ ರೂಪಿಸುವ ಕೆಲಸವಾಗಿದೆ. ಸಾಮಾನ್ಯ ಸಂಘ ಸಂಸ್ಥೆಗಳು ಇಂತಹ ಆರೋಗ್ಯ ಶಿಬಿರ ನಡೆಸುತ್ತಾರೆ. ಆದರೆ ಇವತ್ತು ವ್ಯಾಪಾರಸ್ಥರು ಕೂಡಾ ಸಮಾಜದ ಸೇವೆಯಲ್ಲಿ ಪಾಲ್ಗೊಳ್ಳಬಹುದೆಂದು ಹರೀಶ್ ಭಟ್ ತೋರಿಸಿಕೊಟ್ಟಿದ್ದಾರೆ. ಹೋಮ ಯಾಗಾದಿಗಳಿಂದ ದೇವರನ್ನು ಪ್ರಸನ್ನ ಮಾಡುವುದರೊಂದಿಗೆ ಇಂತಹ ಶಿಬಿರವನ್ನೂ ಮಾಡಿದರೆ ದೇವರು ಮೆಚ್ಚುತ್ತಾರೆ ಎಂದರು.

ಶಿಬಿರವನ್ನು ನಡೆಸಿದೆ ತುಳಸಿ ಕ್ಯಾಟರರ್ಸ್ ಮಾಲಕ ಹರೀಶ್ ರಾವ್ , ಎಸ್.ಜಿ.ಪ್ಯೂರ್ ಮಸಾಲೆ ಸಂಸ್ಥೆಯ ಗಿರಿಧರ್ ಭಟ್, ಶ್ರವಣ್, ಕುಂಕುಮ್ ಅಸೋಸಿಯೇಟ್ಸ್ನ ಸಂತೋಷ್ ರೈ ನಳಿಲು, ವಿಜಯ ಸರ್ವೀಸಸ್ ಮಂಜಲ್ಪಡ್ಪು ಇದರ ಮಾಲಕ ಮಂಜುನಾಥ್ ಭಟ್ ಅವರು ಅತಿಥಿಗಳನ್ನು ಗೌರವಿಸಿದರು. ಶಿಬಿರದ ನಿರ್ದೇಶಕ ಡಾ. ಮನೋಹರ್ ರೈ, ಡಾ ಅಲ್ಪಿಯ, ಡಾ.ಸೂರಜ್, ಡಾ.ಅಪ್ಸಲ್, ಸಾರ್ವಜನಿಕ ಸಂಪರ್ಕಾಧಿಕಾರಿ ಸ್ವೀಕೃತ್, ಪಬ್ಲಿಕ್ ಹೆಲ್ತ್ ಆಫೀಸರ್ ಸಿರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾನ್ವಿ ಪ್ರಾರ್ಥಿಸಿದರು. ಡಾ| ರಾಜೇಶ್ ಬೆಜ್ಜಂಗಳ ಸ್ವಾಗತಿಸಿ ವಂದಿಸಿದರು.