ಹಿಂದೆಲ್ಲ ಅವತಾರ್ ವೀಡಿಯೋ ಅಂದ್ರೆ ಎಲ್ಲರಿಗೂ ಪಂಚಪ್ರಾಣ. ಪುಟಾಣಿಗಳಂತೂ ಬಹಳ ಇಷ್ಟ ಪಡುವ ಕಲೆ ಇದು.. ಕಿರಿಯರಿಂದ ಹಿರಿಯರವರೆಗೂ ಬಹುಬೇಗ ಆಕರ್ಷಣೆಯಾಗುವ ಮನೋರಂಜನೆ ಕ್ಷೇತ್ರಗಳಲ್ಲಿ ಇದೂ ಒಂದು..
ಈಗ ‘ಅವತಾರ್’- ಶೋ ಪುತ್ತೂರಿನಲ್ಲಿ ಲಗ್ಗೆ ಇಟ್ಟಿದೆ. ಪುತ್ತೂರು ಉತ್ಸವದಲ್ಲಿ ಪ್ರಪ್ರಥಮ ಬಾರಿಗೆ ಇದೇ ಸೆ.18ರಿಂದ ಅವತಾರ್ ಶೋ ಆರಂಭವಾಗಲಿದ್ದು ನ.02 ರ ವರೆಗೆ ನಡೆಯಲಿದೆ. ಜೊತೆಗೆ ಇನ್ನು ಹಲವು ಆಕರ್ಷಣೆಗಳು ಈ ಉತ್ಸವದಲ್ಲಿದೆ. ಶಾಪಿಂಗ್ ಮಾಡಲು ಸ್ಟಾಲ್ ಗಳು, ಫುಡ್ ಕೋರ್ಟ್, ಜಾಯಿಂಟ್ ವೀಲ್ ಹೇಗೆ ಹತ್ತು ಹಲವು ಮನೋರಂಜನಾ ವೇದಿಕೆ ಪುತ್ತೂರು ಉತ್ಸವದಲ್ಲಿ ಪುತ್ತೂರ ಜನತೆಯನ್ನು ತನ್ನತ್ತ ಸೆಳೆಯಲು ಸಿದ್ಧವಾಗಿದೆ.