ದಿನಾಂಕ 18-09-2025 ರಂದು ಫಿರ್ಯಾದಿದಾರರ ಮೊಬೈಲ್‌ನಲ್ಲಿ ಪೇಸ್‌ಬುಕ್ ಅಪ್ಲಿಕೇಶನ್ ಅನ್ನು ನೋಡುತ್ತಿರುವಾಗ ಅದರಲ್ಲಿ Vartha Bharati ಎಂಬ ಪೇಸ್‌ಬುಕ್ ಪೇಜ್‌ನವರು ಹಾಕಿರುವ ನ್ಯೂಸ್ ರೀತಿಯ ಪೋಸ್ಟ್ ಗೆ ಹಲವರು comment ಗಳನ್ನು ಹಾಕಿದ್ದು, ಈ ಪೈಕಿ ಸನಾತನಿ ಸಿಂಹ ಎಂಬ ಪೇಸ್‌ಬುಕ್ ಪೇಜ್‌ನ ವ್ಯಕ್ತಿಯು , ಸಮುದಾಯಗಳ ನಡುವೆ ಕೋಮು ಸೌಹಾರ್ದತೆಗೆ ಧಕ್ಕೆಯನ್ನುವುಂಟು ಮಾಡುವ ರೀತಿಯಲ್ಲಿ ಕಮೆಂಟ್ ಹಾಕಿರುವುದಾಗಿದೆ ಎಂದು ಫಿರ್ಯಾದಿದಾರರಾದ ಅಬ್ದುಲ್ ರಹಿಮಾನ್ ಪ್ರಾಯ-36 ವರ್ಷ ಬಂಟ್ವಾಳ ತಾಲೂಕು ಎಂಬವರು ನೀಡಿದ ದೂರಿನಂತೆ ದಿನಾಂಕ 18-09-20250ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 131/2025 ಕಲಂ: 353(2) BNS 2023 ರಂತೆ ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.