ದಿನಾಂಕ: 15-09-2025 ರಂದು ಬೆಳಗ್ಗೆ ಪ್ರಕರಣದ ಫಿರ್ಯಾದಿದಾರರಾದ ಪುತ್ತೂರು ಕಸಬಾ ಗ್ರಾಮ ನಿವಾಸಿ ಶಿವಕುಮಾರ್ ಪಿ.ಬಿ (54) ರವರು ತನ್ನ ಮೊಬೈಲ್ ನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನ್ನು ವೀಕ್ಷಿಸುತ್ತಿದ್ದಾಗ, ಆರೋಪಿ ನವೀನ್ ರೈ ಕೈಕಾರ ಎಂಬಾತನು, ಆತನ ಪೇಸ್ಬುಕ್ ಪೇಜ್‌ನಲ್ಲಿ ರಾಜಕೀಯ ಪಕ್ಷವೊಂದರ ನಾಯಕರಿಗೆ ಅವ್ಯಾಚವಾಗಿ ನಿಂದಿಸಿರುವ ವಿಡಿಯೋವನ್ನು ಪ್ರಸಾರ ಮಾಡಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಪಿರ್ಯಾದಿರವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬರ್ : 81/2025, ಕಲಂ: 296 BNS 2023 ರಂತೆ ಪ್ರಕರಣ ದಾಖಲಾಗಿರುತ್ತದೆ.