ರಾಷ್ಟ್ರ ಮಟ್ಟದಲ್ಲಿ ನಡೆಸಲ್ಪಡುವ ಪ್ರತಿಷ್ಠಿತ “ಆರ್ಯಭಟ” ಗಣಿತ ಸ್ಪರ್ಧೆ – 2025 ಇದರಲ್ಲಿ ಭಾರತದಾದ್ಯಂತ ಎರಡು ಲಕ್ಷಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಪುತ್ತೂರಿನ ಸುದಾನ ವಸತಿಯುತ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿರುವ ಪುತ್ತೂರಿನ ಶ್ರೀ ಗಣೇಶ ಕಾಂಪೌಂಡ್ ಶಿವನಗರ ತೆಂಕಿಲ ನಿವಾಸಿಗಳಾಗಿರುವ ಶಂಕರ ಭಟ್ ಮತ್ತು ನೇತ್ರಾವತಿ ದಂಪತಿಗಳ ಪುತ್ರ, ಮಾಸ್ಟರ್ ವಿಶ್ವಾಸ್ ನಾರಾಯಣ ಭಟ್ ಗುಂಡಿಗದ್ದೆ 21ನೇ ರಾಂಕ್ ಅನ್ನು ಪಡೆದು ಗಣನೀಯ ಸಾಧನೆ ಮಾಡಿದ್ದಾರೆ. ನಾಲ್ಕನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು, ಎಲ್ಲರೂ ಒಂದೇ ರೀತಿಯ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಆರನೇ ತರಗತಿಯ ವಿದ್ಯಾರ್ಥಿಯೊಬ್ಬ ಈ ಸಾಧನೆ ಮಾಡಿರೋದು ವಿಶೇಷವಾಗಿದೆ.
ಪುತ್ತೂರಿನ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯ ನಿರ್ದೇಶಕಿ ಗಣಿತ ಮತ್ತು ಮಾನಸಿಕ ಸಾಮರ್ಥ್ಯ ವಿಷಯಗಳ ತರಬೇತುದಾರೆ ಶ್ರೀಮತಿ ರಮ್ಯಾ ಭಾಗ್ಯೇಶ್ ರೈ ಅವರು ವಿಶ್ವಾಸ್ ಗೆ ತರಬೇತಿ ನೀಡಿರುತ್ತಾರೆ. 2022ನೇ ಸಾಲಿನಲ್ಲಿ ರಾಷ್ಟ್ರಮಟ್ಟದ ಅಬಾಕಸ್ ಚಾಂಪಿಯನ್ 2023ರ ಸಾಲಿನಲ್ಲಿ ಹಾಗೂ 2024 ಮತ್ತು 2025ನೇ ಸಾಲಿನಲ್ಲಿ ಅಂತರಾಷ್ಟ್ರೀಯ ಅಬಾಕಸ್ ಚಾಂಪಿಯನ್ ಆಗಿ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಹೊರಹೊಮ್ಮಿರುವುದನ್ನು ನೆನಪಿಸಿಕೊಳ್ಳಬಹುದಾಗಿದೆ. ಈ ಅಮೋಘ ಸಾಧನೆ ಮಾಡಿದ ವಿಶ್ವಾಸ್ ಗೆ ವಿದ್ಯಾಮಾತಾ ಅಕಾಡೆಮಿಯ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.
ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಯಾವುದೇ ವಿಷಯದ ಬಗ್ಗೆ ಭಯ ಅಥವಾ ಸಮಸ್ಯೆ ಇದೆ ಅಂದಾಗ ಪೋಷಕರು ಟ್ಯೂಷನ್ ಕೊಟ್ಟರೆ ಸರಿ ಹೋಗಬಹುದು ಎನ್ನುವ ನಿಟ್ಟಿನಲ್ಲಿ ಯೋಚಿಸುತ್ತಾರೆ. ಯಾವುದೇ ವಿದ್ಯಾರ್ಥಿಗೆ ಟ್ಯೂಷನ್ ಆ ವರ್ಷದ ಪರೀಕ್ಷೆ ಪಾಸಾಗಲು ಸಹಕಾರಿಯಾಗಬಹುದು ಹೊರತು ಶಾಶ್ವತ ಪರಿಹಾರವಾಗಿರುವುದಿಲ್ಲ. ನಾವು ಯಾವಾಗಲೂ ವಿದ್ಯಾರ್ಥಿಗಳ ಸಮಸ್ಯೆಯ ಶಾಶ್ವತ ಪರಿಹಾರದ ಬಗ್ಗೆ ಯೋಚಿಸುತ್ತೇವೆ. ಈ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶದಲ್ಲೂ ನಿರಂತರ ಯಶಸ್ಸು ಲಭ್ಯವಾಗುತ್ತಿದೆ. ಆರ್ಯಭಟ ಪರೀಕ್ಷೆಯಲ್ಲಿ 21ನೇ ರ್‍ಯಾಂಕ್ ಪಡೆದ ವಿಶ್ವಾಸ್ ಗೆ ಅಭಿನಂದನೆಗಳು.
ಶ್ರೀಮತಿ ರಮ್ಯಾ ಭಾಗ್ಯೇಶ್ ರೈ,
ನಿರ್ದೇಶಕರು ಮತ್ತು ತರಬೇತುದಾರರು,
ವಿದ್ಯಾಮಾತಾ ಅಕಾಡೆಮಿ
