ಪುತ್ತೂರು: ಪುತ್ತೂರಿನಲ್ಲಿ ಆಧುನಿಕ ತಂತ್ರಜ್ಞಾನ, ಕಲಾತ್ಮಕತೆ ಹಾಗೂ ಕ್ರಿಯೇಟಿವಿಟಿಯನ್ನು ಒಟ್ಟುಗೂಡಿಸುವ “STORY BY DHANU – Photography, Videography & Editing Studio” ಉದ್ಘಾಟನೆ ಅಕ್ಟೋಬರ್ 2, 2025ನೇ ಗುರುವಾರ ಬೆಳಿಗ್ಗೆ 10.30ಕ್ಕೆ ಜರುಗಲಿದೆ.
ತೆಂಕಿಲದ ಪುಷ್ಪ ಸ್ಕ್ವೇರ್ ಕಟ್ಟಡದ ಎರಡನೇ ಮಹಡಿಯಲ್ಲಿ ರುವ ನೂತನ ಸ್ಟುಡಿಯೋವನ್ನು ಮಾಜಿ ಸಂಸದರು,ಮಾಜಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಲಿದ್ದಾರೆ.
ವಿಜಯ ಸಾಮ್ರಾಟ್ ಸ್ಥಾಪಕ ಸಹಜ್ ರೈ ಬಳಜ್ಜ, ಅವರು ದೀಪಪ್ರಜ್ವಲನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ. ಯು.ಪಿ. ಶಿವಾನಂದ (ಆಡಳಿತ ನಿರ್ದೇಶಕರು, ಸುದ್ದಿ ಸಮೂಹ ಸಂಸ್ಥೆಗಳು), ಸೀತಾರಾಮ ರೈ (ಮಾಲಕರು, ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್ ಪುತ್ತೂರು), ಜಯಂತ ಗೌಡ ಕರ್ಕುಂಜ (ಅಧ್ಯಕ್ಷರು, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್, ಪುತ್ತೂರು ವಲಯ), ಹಾಗೂ ಅಭಿಜಿತ್ (ಮಾಲಕರು, ಪುಷ್ಪ ಸ್ಕ್ವೇರ್) ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಪಾಲುದಾರರಾದ ಧನುಷ್ ಮತ್ತು ಕುಟುಂಬಸ್ಥರು, ನಾಗೇಂದ್ರ ರೈ ಮತ್ತು ಕುಟುಂಬಸ್ಥರು,ಸಂಕೇತ್, ಮೋಹಿತ್, ಜಗದೀಶ ತಿಳಿಸಿದ್ದಾರೆ.